ಹಳೆಯದನ್ನು ಮರೆತು ಭಾರತ-ಪಾಕಿಸ್ತಾನ​​ ಒಂದಾಗಿ ಮುಂದೆ ಸಾಗಲಿವೆ: ಪಾಕ್ ಸೇನಾಧಿಕಾರಿ - BC Suddi
ಹಳೆಯದನ್ನು ಮರೆತು ಭಾರತ-ಪಾಕಿಸ್ತಾನ​​ ಒಂದಾಗಿ ಮುಂದೆ ಸಾಗಲಿವೆ: ಪಾಕ್ ಸೇನಾಧಿಕಾರಿ

ಹಳೆಯದನ್ನು ಮರೆತು ಭಾರತ-ಪಾಕಿಸ್ತಾನ​​ ಒಂದಾಗಿ ಮುಂದೆ ಸಾಗಲಿವೆ: ಪಾಕ್ ಸೇನಾಧಿಕಾರಿ

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ಹಳೆಯದನ್ನು ಮರೆತು ಒಟ್ಟಾಗಿ ಮುಂದೆ ಸಾಗಲಿವೆ ಎಂದು ಚೀಫ್ ಆಫ್ ಪಾಕಿಸ್ತಾನ​ ಆರ್ಮ್ ಸ್ಟಾಫ್ ಜನರಲ್ ಕಮರ್ ಜಾವೇದ್ ಬಾಜ್ವಾ ಹೇಳಿದ್ದಾರೆ.

ಇಸ್ಲಾಮಾಬಾದ್​ನಲ್ಲಿ ಮಾತನಾಡಿದ ಅವರು, “ಭಾರತ-ಪಾಕಿಸ್ತಾನದ ಸಂಬಂಧವೇ ದಕ್ಷಿಣ ಮತ್ತು ಮಧ್ಯ ಏಷಿಯಾದ ನಡುವಿನ ಕೀ ಆಗಿದೆ. ಇದರಿಂದ ಉತ್ತರ ಮತ್ತು ದಕ್ಷಿಣ ಏಷಿಯಾ ನಡುವೆ ಸಂಪರ್ಕ ಸಾಧ್ಯವಾಗಲಿದೆ. ಆದರೆ ಸಾಧ್ಯತೆ ಯಾವಾಗಲೂ ಎರಡು ಪರಮಾಣು ದೇಶಗಳ ನಡುವಿನ ವಿವಾದ ಮತ್ತು ಸಮಸ್ಯೆಗಳಿಗೆ ಒತ್ತೆಯಾಳಾಗಿ ಉಳಿದುಹೋಗಿದೆ. ಕಾಶ್ಮೀರದ ಸಮಸ್ಯೆ ಇದರ ಕೇಂದ್ರವಾಗಿದೆ. ಈ ವಿವಾದವನ್ನು ಶಾಂತಿಯುತ ವಿಧಾನಗಳ ಮೂಲಕ ಬಗೆಹರಿಸದೆ, ರಾಜಕೀಯ ಪ್ರೇರಿತಗೊಂಡು ಯುದ್ಧ ಮಾಡಿದರೆ ಒಪ್ಪಂದದ ಪ್ರಕ್ರಿಯೆ ಯಾವಾಗಲೂ ಹಳಿ ತಪ್ಪುವ ಸಾಧ್ಯತೆ ಇರುತ್ತದೆ. ಈ ವಿಚಾರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ” ಎಂದು ತಿಳಿಸಿದ್ದಾರೆ.

error: Content is protected !!