ಜಲ ಗಡಿ ಉಲ್ಲಂಘನೆ ಆರೋಪ - 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್ - BC Suddi
ಜಲ ಗಡಿ ಉಲ್ಲಂಘನೆ ಆರೋಪ – 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್

ಜಲ ಗಡಿ ಉಲ್ಲಂಘನೆ ಆರೋಪ – 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್

ಕರಾಚಿ: ಜಲ ಗಡಿ ಉಲ್ಲಂಘನೆ ಮಾಡಿ ಪಾಕಿಸ್ತಾನ ಜಲ ಗಡಿ ಪ್ರವೇಶ ಮಾಡಿದ ಆರೋಪದಲ್ಲಿ 11 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಕಡಲ ಭದ್ರತಾ ಪಡೆ ಬಂಧಿಸಿದೆ.

ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಪಾಕಿಸ್ತಾನ ಕಡಲ ಭದ್ರತಾ ಪಡೆ (ಪಿಎಂಎಸ್ಎ), ”ಭಾರತದ ಎರಡು ಬೋಟ್‌ಗಳು ಪಾಕ್‌ನ ಜಲ ಪ್ರದೇಶವನ್ನು ಪ್ರವೇಶಿಸಿದ ಹಿನ್ನೆಲೆ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಆ ಎರಡು ಬೋಟ್‌ಗಳಲ್ಲಿದ್ದ 11 ಭಾರತೀಯ ಮೀನುಗಾರರನ್ನು ಕೂಡಾ ಬಂಧಿಸಲಾಗಿದೆ. ಅವರ ಪ್ರಾಥಮಿಕ ವಿಚಾರಣೆ ನಡೆಸಿ ಆ ನಂತರ ಡಾಕ್ಸ್ ಪೊಲೀಸ್ ಕರಾಚಿಯ ವಶಕ್ಕೆ ಅವರನ್ನು ನೀಡಲಾಗಿದೆ. ಭಾರತೀಯ ಮೀನುಗಾರರು ಪಾಕಿಸ್ತಾನದ ಪೂರ್ವ ಕಡಲ ವಿಶೇಷ ಆರ್ಥಿಕ ವಲಯದಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದರು” ಎಂದು ತಿಳಿಸಿದೆ.

”ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಜಲ ಪ್ರದೇಶದಲ್ಲಿ ಅನಗತ್ಯ, ಅಕ್ರಮ ಒಳನುಗ್ಗುವಿಕೆಯನ್ನು ಗಮನಿಸಲಾದ ಹಿನ್ನೆಲೆ ಪಿಎಂಎಸ್ಎ ಹಡಗುಗಳು, ವಿಮಾನಗಳು ಹಾಗೂ ವೇಗದ ದೋಣಿಗಳು ನಿಯಮಿತವಾಗಿ ಕಡಲ ವಲಯದಲ್ಲಿ ಗಸ್ತು ತಿರುಗುತ್ತದೆ ಮತ್ತು ಮೇಲ್ವಿಚಾರಣೆಯನ್ನು ನಡೆಸುತ್ತದೆ” ಎಂದು ಕೂಡಾ ಪಿಎಂಎಸ್ಎ ತಿಳಿಸಿದೆ.

error: Content is protected !!