300 ಪುಟಗಳ ವಾಟ್ಸಾಪ್ ಚಾಟಿಂಗ್ ಹಿಸ್ಟರಿ ನೀಡಿದ ಸಿಡಿ ಯುವತಿ ಪರ ವಕೀಲ ಜಗದೀಶ್‌ - BC Suddi
300 ಪುಟಗಳ ವಾಟ್ಸಾಪ್ ಚಾಟಿಂಗ್ ಹಿಸ್ಟರಿ ನೀಡಿದ ಸಿಡಿ ಯುವತಿ ಪರ ವಕೀಲ ಜಗದೀಶ್‌

300 ಪುಟಗಳ ವಾಟ್ಸಾಪ್ ಚಾಟಿಂಗ್ ಹಿಸ್ಟರಿ ನೀಡಿದ ಸಿಡಿ ಯುವತಿ ಪರ ವಕೀಲ ಜಗದೀಶ್‌

ಬೆಂಗಳೂರು : ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರವು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್‌ ಜಾರಕಿಹೊಳಿ ಮತ್ತು ಸಿಡಿ ಲೇಡಿ ನಡುವೆ ನಡೆದಿದೆ ಎನ್ನಲಾಗಿರುವ 300 ಪುಟಗಳ ವಾಟ್ಸಪ್‌ ಚಾಟಿಂಗ್‌ ಹಿಸ್ಟರಿಯನ್ನು ಯುವತಿ ಪರ ವಕೀಲರು ಇಂದು ತನಿಖಾಧಿಕಾರಿಗಳಿಗೆ ನೀಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಿಡಿ ಯುವತಿ ಪರ ವಕೀಲ ಜಗದೀಶ್‌ 300 ಪುಟಗಳ ಯುವತಿ ಮತ್ತು ರಮೇಶ್ ಜಾರಕಿಹೊಳಿ ವಾಟ್ಸಾಪ್‌ ಚಾಟಿಂಗ್‌ ಹಿಸ್ಟರಿ ಕಲೆ ಹಾಕಿದ್ದು, ತನಿಖೆ ಸಹಾಯಕವಾಗುವ ನಿಟ್ಟಿನಲ್ಲಿ ಅವರು ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ರಮೇಶ್‌ ಜಾರಕಿಹೊಳಿ ಯುವತಿಗೆ ನೀಡಿದ್ದಾರೆ ಎನ್ನಲಾಗುತ್ತಿರುವ ಬೆಲೆ ಬಾಳುವ ಉಡುಗೊರೆ, ಮೊಬೈಲ್ ಕರೆಗಳ ವಾಯ್ಸ್‌ ರೆಕಾರ್ಡ್‌, ಬಿಲ್‌, ಅಲ್ಲದೇ ಇಬ್ಬರು ಜೊತೆಯಲ್ಲಿದ್ದ ಪೋಟೋಗಳನ್ನು ಸಹ ನೀಡಲಿದ್ದಾರೆ ಎನ್ನಲಾಗಿದೆ ಎಂಬ ಮುಖ್ಯ ಮಾಹಿತಿ ತಿಳಿದು ಬಂದಿದೆ.

ಇನ್ನು ಕೆಲ ಸಮಯದಲ್ಲಿ ಜಗದೀಶ್‌ ಅವರ ವಕೀಲ ತಂಡ ಅಡುಗೋಡಿಯಲ್ಲಿರುವ ಪೊಲೀಸ್‌ ಇಲಾಖೆಯ ಟೆಕ್ನಿಕಲ್‌ ವಿಭಾಗಕ್ಕೆ ತೆರಳಿ ದಾಖಲೆಗಳನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ.

error: Content is protected !!