ಕೋವಿಡ್ ಕಾಲ : ಪ್ರತಿ ರಾಜ್ಯದ ಮಾಹಿತಿ ಪಡೆದ ಮೋದಿ : ಆಕ್ಸಿಜನ್ ವ್ಯವಸ್ಥೆ ಭರವಸೆ - BC Suddi
ಕೋವಿಡ್ ಕಾಲ : ಪ್ರತಿ ರಾಜ್ಯದ ಮಾಹಿತಿ ಪಡೆದ ಮೋದಿ : ಆಕ್ಸಿಜನ್ ವ್ಯವಸ್ಥೆ ಭರವಸೆ

ಕೋವಿಡ್ ಕಾಲ : ಪ್ರತಿ ರಾಜ್ಯದ ಮಾಹಿತಿ ಪಡೆದ ಮೋದಿ : ಆಕ್ಸಿಜನ್ ವ್ಯವಸ್ಥೆ ಭರವಸೆ

ದೆಹಲಿ: ಸುಪ್ರೀಂ ದೇಶದಲ್ಲಿಯ ಕೋವಿಡ್ ತುರ್ತು ಪರಿಸ್ಥಿತಿಯ ವರದಿ ಕೇಳಿದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೊವಿಡ್ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ ,ಕೇರಳ, ಛತ್ತೀಸಗಡ, ಮಧ್ಯಪ್ರದೇಶ ಮತ್ತೆ ದೆಹಲಿಯ ಮುಖ್ಯಮಂತ್ರಿ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ .

ಕೊವಿಡ್ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿಯವರ ಜತೆ ಮಾತನಾಡಿದ ಅರವಿಂದ ಕೇಜ್ರಿವಾಲ್ ರಾಜ್ಯ ಸರ್ಕಾರಗಳಿಗೂ ಕೇಂದ್ರ ಸರ್ಕಾರಕ್ಕೆ ಲಭ್ಯವಾಗುವ ದರದಲ್ಲಿಯೇ ಕೊವಿಡ್ ಲಸಿಕೆ ಲಭ್ಯವಾಗುವಂತಿರಬೇಕು ಎಂದು ಹೇಳಿದ್ದಾರೆ. ದೆಹಲಿಗೆ ಬರುವ ಆಕ್ಸಿಜನ್ ಟ್ಯಾಂಕರ್ ಗಳು ಅಡಚಣೆ ಇಲ್ಲದ ಬರುವುದಕ್ಕಾಗಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸಹಾಯ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿ ಎಂದು ನಾನು ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ.

ಇದಕ್ಕಾಗಿ ರಾಷ್ಟ್ರೀಯ ಯೋಜನೆ ಮಾಡಬೇಕಿದೆ. ಒಡಿಶಾ, ಪಶ್ಚಿಮಬಂಗಾಳದಿಂದ ದೆಹಲಿಗೆ ಆಕ್ಸಿಜನ್ ಬರುವುದಿದೆ. ಇದನ್ನು ಆಕ್ಸಿಜನ್ ಎಕ್ಸ್ ಪ್ರೆಸ್ ಅಥವಾ ಏರ್ ಲಿಫ್ಟ್ ಮಾಡಿ ಕಳಿಸಬೇಕು ಎಂದು ಹೇಳಿದ್ದಾರೆ. ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯನ್ನು ಸರಿದೂಗಿಸಿದ ನಂತರ ರಾಜ್ಯಗಳಿಗೆ ಆಮ್ಲಜನಕದ ಪೂರೈಕೆ ಸುಗಮವಾಗಿ, ಅಡೆತಡೆಯಿಲ್ಲದಂತೆ ನೋಡಿಕೊಳ್ಳಲು ಪ್ರಧಾನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಡೆಡ್ಲಿ ಸೋಂಕಿಗೆ ಒಂದೇ ಕುಟುಂಬದಲ್ಲಿ 3 ಸಾವು : ಕುಣಿಕೆಗೆ ಕೊರಳೊಡ್ಡಿದ ಸೊಸೆ