ಆಕ್ಸಿಜನ್ ಸಾರ್ವಜನಿಕ ಆರೋಗ್ಯದ ಅತ್ಯವಶ್ಯಕ ವಸ್ತು, ಇದನ್ನು ಮಿತವಾಗಿ ಬಳಸಿ : ರಾಜ್ಯಗಳಿಗೆ ಕೇಂದ್ರದಿಂದ ಸಲಹೆ - BC Suddi
ಆಕ್ಸಿಜನ್ ಸಾರ್ವಜನಿಕ ಆರೋಗ್ಯದ ಅತ್ಯವಶ್ಯಕ ವಸ್ತು, ಇದನ್ನು ಮಿತವಾಗಿ ಬಳಸಿ : ರಾಜ್ಯಗಳಿಗೆ ಕೇಂದ್ರದಿಂದ ಸಲಹೆ

ಆಕ್ಸಿಜನ್ ಸಾರ್ವಜನಿಕ ಆರೋಗ್ಯದ ಅತ್ಯವಶ್ಯಕ ವಸ್ತು, ಇದನ್ನು ಮಿತವಾಗಿ ಬಳಸಿ : ರಾಜ್ಯಗಳಿಗೆ ಕೇಂದ್ರದಿಂದ ಸಲಹೆ

ಬೆಂಗಳೂರು: ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಸಂದರ್ಭ ದೇಶದೆಲ್ಲೆಡೆ ಆಕ್ಸಿಜನ್ ಪೂರೈಕೆಯ ಚಿಂತೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಉಪಯುಕ್ತ ಸಲಹೆ ನೀಡಿದೆ. ಆಕ್ಸಿಜನ್ ಸಾರ್ವಜನಿಕ ಆರೋಗ್ಯದ ಅತ್ಯವಶ್ಯಕ ವಸ್ತುವಾಗಿದೆ.

ಇದನ್ನು ವ್ಯರ್ಥ ಮಾಡದೆ ವಿವೇಚನೆಯಿಂದ ಮೆಡಿಕಲ್ ಆಕ್ಸಿಜನ್ ಬಳಕೆಯಾಗುವಂತೆ ನೋಡಿಕೊಳ್ಳಬೇಕೆಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಹೇಳಿದೆ. ದೇಶದಲ್ಲಿ ಆಕ್ಸಿಜನ್ ದಾಸ್ತಾನಿದೆ. ಸಾರ್ವಜನಿಕರು ಅನಗತ್ಯವಾಗಿ ಗೊಂದಲಕ್ಕೀಡಾಗಬಾರದು.

ವಿವೇಚನೆಯಿಂದ ಆಕ್ಸಿಜನ್ ಬಳಕೆಯಾಗಬೇಕು. ಬಹಳಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಆಕ್ಸಿಜನ್ ಬೇಕಿಲ್ಲ ಎಂದು ಕೇಂದ್ರ ಗೃಹ ಕಾರ್ಯಾಲಯ ಸಲಹೆ ನೀಡಿದೆ. ಪರಿಸ್ಥಿತಿ ಗಂಭೀರವಾದಾಗ ಆಕ್ಸಿಜನ್ ಅಗತ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.

 

ಗುಜರಾತ್:  ಭರೂಚ್​​, ಪಟೇಲ್ ವೆಲ್ಫೇರ್ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 18 ಜನ ಮೃತ