ಆಕ್ಸಿಜನ್ ಇಲ್ಲಾ ಎನ್ನುವುದು ಒಂದುಕಡೆಯಾದ್ರೆ ಇದ್ದ ಆಕ್ಸಿಜನ್ ಬಳಸದೆ 4 ಜನರ ಸಾವಿಗೆ ಕಾರಣರಾದ ಜಿಲ್ಲಾಸ್ಪತ್ರೆ ಅಧಿಕಾರಿ ಅಮಾನತು! - BC Suddi
ಆಕ್ಸಿಜನ್ ಇಲ್ಲಾ ಎನ್ನುವುದು ಒಂದುಕಡೆಯಾದ್ರೆ ಇದ್ದ ಆಕ್ಸಿಜನ್ ಬಳಸದೆ 4 ಜನರ ಸಾವಿಗೆ ಕಾರಣರಾದ ಜಿಲ್ಲಾಸ್ಪತ್ರೆ ಅಧಿಕಾರಿ ಅಮಾನತು!

ಆಕ್ಸಿಜನ್ ಇಲ್ಲಾ ಎನ್ನುವುದು ಒಂದುಕಡೆಯಾದ್ರೆ ಇದ್ದ ಆಕ್ಸಿಜನ್ ಬಳಸದೆ 4 ಜನರ ಸಾವಿಗೆ ಕಾರಣರಾದ ಜಿಲ್ಲಾಸ್ಪತ್ರೆ ಅಧಿಕಾರಿ ಅಮಾನತು!

ಕೋಲಾರ: ಡೆಡ್ಲಿ ಸೋಂಕು ಮನುಷ್ಯನ ಉಸಿರು ನಿಲ್ಲಿಸುತ್ತಿರುವ ಪರಿ ನಿಲ್ಲುತ್ತಿಲ್ಲ. ಎಲ್ಲೇಡೆ ಆಕ್ಸಿಜನ್ ಹಾಹಾರ ಶುರುವಾಗಿದೆ. ಆಕ್ಸಿಜನ್ ಇಲ್ಲಾ ಎನ್ನುವುದು ಒಂದುಕಡೆಯಾದ್ರೆ ಇದ್ದ ಆಕ್ಸಿಜನ್ ಬಳಸದೆ 4 ಜನರ ಸಾವಿಗೆ ಕಾರಣರಾದ ಜಿಲ್ಲಾ ಶಸ್ತ್ರಚಿಕಿತ್ಸಕ, ಆರ್.ಎಂ.ಒ ರನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಮಾನತ್ತು ಮಾಡಿದ್ದಾರೆ.

ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 4 ಮಂದಿ ಸೋಂಕಿತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸುಧಾಕರ್ ಅವರು, ಆಸ್ಪತ್ರೆಯಲ್ಲಿ 40 ವೆಂಟಿಲೇಟರ್ ಇದ್ರೂ ಬಳಸ್ತಿಲ್ಲ, ಇದು ದೊಡ್ಡ ಅಪರಾಧ.

ವೆಂಟಿಲೇಟರ್ ಬಳಸಿದ್ರೆ ಕನಿಷ್ಠ 40 ಜನರನ್ನ ಉಳಿಸಬಹುದಿತ್ತು. ಆಸ್ಪತ್ರೆಯಲ್ಲಿ ನಿತ್ಯ 10 ರಿಂದ 11 ಜನರು ಸಾಯುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಅಟೆಂಡರ್ ಇಟ್ಟಿದ್ದಾರೆ. ರೋಗಿಗಳಿಗೆ ಅಟೆಂಡರ್ ರಾಜ್ಯದಲ್ಲಿ ಎಲ್ಲೂ ಇಲ್ಲ, ಇದು ತಪ್ಪು. ಕೊರೊನಾ ನಿರ್ವಹಣೆಗೆ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಅಂತೆಯೇ ನಿನ್ನೆ ನಡೆದ ಆಕ್ಸಿಜನ್ ಸರಬರಾಜಲ್ಲಿ ಆದ ದೋಷ ಕುರಿತು ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ಅಲ್ಲದೆ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳಿಂದ ನಿರ್ವಹಣೆ ಮಾಡುತ್ತಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಆರ್.ಎಂ.ಓ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ಏಪ್ರಿಲ್ 26ರ ರಾತ್ರಿ ಅಂದರೆ ನಿನ್ನೆ ಆಕ್ಸಿಜನ್ ಸಮಸ್ಯೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ನಾಲ್ವರು ಮೃತಪಟ್ಟಿದ್ದರು.

ಸರ್ಕಾರ ಚುನಾವಣೆ ನಡೆಸಿದ್ದರಿಂದ ನಾನು ಪ್ರಚಾರಕ್ಕೆ ಹೋಗಬೇಕಾಯ್ತು, ಇಲ್ಲವಾದರೆ ನಾನು ಯಾಕೆ ಹೋಗುತ್ತಿದ್ದೆ : ಸಿದ್ದರಾಮಯ್ಯ