ದೇಶದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆ ನೀಗಿಸಲು ಮುಂದಾದ ಟಾಟಾ ಕಂಪೆನಿ - BC Suddi
ದೇಶದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆ ನೀಗಿಸಲು ಮುಂದಾದ ಟಾಟಾ ಕಂಪೆನಿ

ದೇಶದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆ ನೀಗಿಸಲು ಮುಂದಾದ ಟಾಟಾ ಕಂಪೆನಿ

ನವದೆಹಲಿ: ದೇಶದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಟಾಟಾ ಕಂಪೆನಿಗಳ ಗುಂಪು ಮುಂದಾಗಿದೆ. ದ್ರವರೂಪದ ಆಕ್ಸಿಜನ್​​ಅನ್ನು ಸಾಗಣೆ ಮಾಡುವುದಕ್ಕಾಗಿ 24 ಕ್ರಯೋಜೆನಿಕ್ ಕಂಟೇನರ್​ಗಳನ್ನು ಆಮದು ಮಾಡುವುದಾಗಿ ಟಾಟಾ ಕಂಪೆನಿಗಳ ಗುಂಪು ಪ್ರಕಟಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಟಾಟಾ ಗುಂಪು, “ದೇಶದ ಜನರಿಗೆ ಪ್ರಧಾನಿ ಮೋದಿ ಅವರ ಮನವಿ ಶ್ಲಾಘನೀಯವಾಗಿದೆ. ಕೊರೊನಾ ವಿರುದ್ಧದ ಹೋರಾಟವನ್ನು ಸಶಕ್ತಗೊಳಿಸಲು ಟಾಟಾ ಗುಂಪು ಬದ್ಧವಾಗಿದೆ. ಆಕ್ಸಿಜನ್ ಸಮಸ್ಯೆಯನ್ನು ನೀಗಿಸಲು, ಆರೋಗ್ಯ ಮೂಲಸೌಕರ್ಯಕ್ಕೆ ಶಕ್ತಿ ತುಂಬುವ ಒಂದು ಪ್ರಯತ್ನ ಮಾಡುತ್ತಿದ್ದೇವೆ” ಎಂದು ತಿಳಿಸಿದೆ.

ಈ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದನ್ನು “ಸಹಾನುಭೂತಿಯ ಸಂಕೇತ” ಎಂದು ಬಣ್ಣಿಸಿ, ಒಟ್ಟಾಗಿ, ಭಾರತದ ಜನರು ಕೋವಿಡ್ 19 ಅನ್ನು ಎದುರಿಸುವರು ಎಂದು ಟ್ವೀಟ್ ಮಾಡಿದ್ದಾರೆ.

ಧಾರವಾಡ: ಮುಷ್ಕರ ಮಧ್ಯೆಯೂ 104 ಬಸ್‌ಗಳ ಕಾರ್ಯಾರಂಭ: 15 ಸಿಬ್ಬಂದಿ ವಜಾ