ನಮ್ಮ ಮಗಳು ಸಾಮಾನ್ಯರಂತೆ ಬೆಳೆಯಬೇಕು, ಮೌಲ್ಯ-ಸಂಸ್ಕಾರ ಕಲಿಯಬೇಕು: ಅನುಷ್ಕಾ ಶರ್ಮಾ - BC Suddi
ನಮ್ಮ ಮಗಳು ಸಾಮಾನ್ಯರಂತೆ ಬೆಳೆಯಬೇಕು, ಮೌಲ್ಯ-ಸಂಸ್ಕಾರ ಕಲಿಯಬೇಕು: ಅನುಷ್ಕಾ ಶರ್ಮಾ

ನಮ್ಮ ಮಗಳು ಸಾಮಾನ್ಯರಂತೆ ಬೆಳೆಯಬೇಕು, ಮೌಲ್ಯ-ಸಂಸ್ಕಾರ ಕಲಿಯಬೇಕು: ಅನುಷ್ಕಾ ಶರ್ಮಾ

ಮುಂಬೈ: “ನಮ್ಮ ಮಗಳು ಸಾಮಾನ್ಯರಂತೆ ಬೆಳೆಯಬೇಕು, ಮೌಲ್ಯ-ಸಂಸ್ಕಾರ ಕಲಿಯಬೇಕು, ಹೀಗಾಗಿ ನಾವು ಅವಳನ್ನು ಸಾರ್ವಜನಿಕ ಜೀವನದಿಂದ ದೂರ ಇಡುತ್ತೇವೆ” ಎಂದು ಅನುಷ್ಕಾ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ದಂಪತಿಗಳ ಮನೆಗೆ ಜನವರಿ 12, 2021ರಂದು ಹೆಣ್ಣು ಮಗುವಿನ ಆಗಮವಾಗಿದ್ದು, ಆ ಬಳಿಕ ಮಗುವಿಗೆ ವಾಮಿಕಾ ಅಂತ ಹೆಸರಿಡಲಾಗಿತ್ತು.

ವಾಮಿಕಾ ಅಂದರೆ ದುರ್ಗಿಯ ಹೆಸರು. ಇದರಲ್ಲಿ ‘ವಿ’, ‘ಕೆ’ ಅಕ್ಷರಗಳು ಇವೆ, ಅರ್ಥಾತ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಹೆಸರಿನ ಅಕ್ಷರಗಳು ಇಲ್ಲಿ ಜೋಡಿಯಾಗಿದ್ದು, ಅದೃಷ್ಟವಂತ ಮಗು ಎಂದು ಕೂಡ ಹೇಳಲಾಗುತ್ತದೆ.

“ಸಿನಿಮಾ ನಟ, ನಟಿಯರ ಮಕ್ಕಳೆಂದರೆ ಅನೇಕರು ಕಣ್ಣು ಅವರ ಮೇಲಿರುತ್ತದೆ. ವಿರುಷ್ಕಾ ದಂಪತಿ ಎಂದ ಕೂಡಲೇ ಅಲ್ಲಿ ಚಿತ್ರರಂಗ, ಕ್ರಿಕೆಟ್ ಕೂಡ ಸೇರಿರುತ್ತದೆ. ಹಾಗಾಗಿ “ನಮ್ಮ ಮಗಳು ಸಾಮಾನ್ಯರಂತೆ ಬೆಳೆಯಬೇಕು, ಮೌಲ್ಯ-ಸಂಸ್ಕಾರ ಕಲಿಯಬೇಕು, ಹೀಗಾಗಿ ನಾವು ಅವಳನ್ನು ಸಾರ್ವಜನಿಕ ಜೀವನದಿಂದ ದೂರ ಇಡುತ್ತೇವೆ” ಎಂದು ಅನುಷ್ಕಾ ಹೇಳಿದ್ದಾರೆ.

“ನಾವು ಏನನ್ನೂ ಮರೆಮಾಚುತ್ತಿರಲಿಲ್ಲ, ನಾವು ಕೇವಲ ಇಬ್ಬರು ಸಾಮಾನ್ಯ ಯುವಕರಾಗಿದ್ದೇವೆ. ಆದರೆ ಸಾರ್ವಜನಿಕ ವ್ಯಕ್ತಿಗಳಾಗಿರುವುದರಿಂದ ನಮ್ಮ ಸಂಬಂಧವು ಮನರಂಜನೆಯ ವಿಷಯವಾಗಿ ಪರಿಣಮಿಸುತ್ತದೆ” ಎಷ್ಟೆ ಎಂದರು.

ಇನ್ನು “ಯಾವುದೇ ಮಗುವನ್ನು ಇತರರಿಗಿಂತ ಹೆಚ್ಚು ವಿಶೇಷವಾಗಿಸಬಾರದು “ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ಇನ್ನು ನಟಿ ಅನುಷ್ಕಾ ಶರ್ಮ, ವಿರಾಟ್ ಕೊಹ್ಲಿ ಅಹಮದಾಬಾದ್ ಏರ್​ಪೋರ್ಟ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ದಂಪತಿ ತಮ್ಮ ಮಗುವಿನೊಂದಿಗೆ ಕಂಡುಬಂದ ಫೊಟೊಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡಿತ್ತು. ಅದರಲ್ಲಿ ಅನುಷ್ಕಾ ಶರ್ಮ ತಮ್ಮ ಮಗಳನ್ನು ಎತ್ತಿಕೊಂಡಿದ್ದರೆ, ವಿರಾಟ್ ಕೊಹ್ಲಿ ಲಗೇಜ್​ನ್ನು ಹಿಡಿದು ಕಂಡುಬಂದಿದ್ದರು. ಆದರೆ ಮಗುವಿನ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಬಾರದೆಂದು ದಂಪತಿಗಳು ಕೇಳಿಕೊಂಡಿದ್ದಂತೆ ವೈರಲ್ ಆಗಿರುವ ಫೊಟೊದಲ್ಲೂ ಮಗುವಿನ ಮುಖ ಕಾಣುತ್ತಿಲ್ಲ.

ದೇಶದ ಪ್ರಧಾನಿ ಅಂಧ ದರ್ಬಾರ್‌ನಿಂದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ವೈ ಸ್ಪೂರ್ತಿ ಪಡೆದರೆ: ರಾತ್ರಿ ಕರ್ಪ್ಯೂ ವಿರುದ್ದ ಸಿದ್ದು ಕಿಡಿ