ಕೊರೊನಾದ ಸಂಕಷ್ಟದ ಸಂದರ್ಭ ಸರ್ಕಾರದೊಂದಿಗೆ ವಿರೋಧ ಪಕ್ಷದವರು ಸಹಕರಿಸಬೇಕು : ಶ್ರೀರಾಮುಲು - BC Suddi
ಕೊರೊನಾದ ಸಂಕಷ್ಟದ ಸಂದರ್ಭ ಸರ್ಕಾರದೊಂದಿಗೆ ವಿರೋಧ ಪಕ್ಷದವರು ಸಹಕರಿಸಬೇಕು : ಶ್ರೀರಾಮುಲು

ಕೊರೊನಾದ ಸಂಕಷ್ಟದ ಸಂದರ್ಭ ಸರ್ಕಾರದೊಂದಿಗೆ ವಿರೋಧ ಪಕ್ಷದವರು ಸಹಕರಿಸಬೇಕು : ಶ್ರೀರಾಮುಲು

ಬಾಗಲಕೋಟೆ: “ಕೊರೊನಾ ನಿಯಂತ್ರಣಕ್ಕಾಗಿ ಉಸ್ತುವಾರಿ ಸಚಿವರ ಬದಲಾವಣೆ ಆಗಿದೆ. ರಾಜಕಾರಣದಲ್ಲಿ ಬದಲಾವಣೆ ಆಗೋದು ಸಹಜ ಪ್ರಕ್ರಿಯೆ” ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. ಉಸ್ತುವಾರ ಸಚಿವರ ಬದಲಾವಣೆ ಬಗ್ಗೆ ರವಿವಾರ ತೇರದಾಳ ಪಟ್ಟಣದಲ್ಲಿ ಮಾತನಾಡಿದ ಅವರು, “ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದ್ದಾರೆ.

ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಸಚಿವರ ಬದಲಾವಣೆ ಆಗಿದ್ದು, ಸಿಎಂ ಅವರು ಆಕ್ಟಿವ್‌ ಆಗಿ ಕೆಲಸ ಮಾಡುವ ಸಚಿವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ” ಎಂದು ಹೇಳಿದ್ದಾರೆ. “ಕೊರೊನಾ ಸಂದರ್ಭ ನಿಸ್ವಾರ್ಥಿಯಾಗಿ ಕೆಲಸ ಮಾಡಬೇಕು. ಕೊರೊನಾದ ಸಂಕಷ್ಟದ ಸಂದರ್ಭ ಸರ್ಕಾರದೊಂದಿಗೆ ವಿರೋಧ ಪಕ್ಷದವರು ಸಹಕರಿಸಬೇಕು” ಎಂದಿದ್ದಾರೆ. ಉಮೇಶ್‌ ಕತ್ತಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಅವರ ವೈಯುಕ್ತಿಕ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಹೇಳಿಕೆ ನೀಡಿ ಮುಜುಗರಕ್ಕೆ ಒಳಪಡುವುದಿಲ್ಲ” ಎಂದು ಹೇಳಿದ್ದಾರೆ.

ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 8,923 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ