ಜಾತಿವಾರು ಮೀಸಲಾತಿ ಇನ್ನು ಎಷ್ಟು ತಲೆಮಾರು ಇರಬೇಕು: ಸುಪ್ರೀಂ ಕೋರ್ಟ್ - BC Suddi
ಜಾತಿವಾರು ಮೀಸಲಾತಿ ಇನ್ನು ಎಷ್ಟು ತಲೆಮಾರು ಇರಬೇಕು: ಸುಪ್ರೀಂ ಕೋರ್ಟ್

ಜಾತಿವಾರು ಮೀಸಲಾತಿ ಇನ್ನು ಎಷ್ಟು ತಲೆಮಾರು ಇರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ಜಾತಿವಾರು ಮೀಸಲಾತಿಯಲ್ಲಿ  ಶಿಕ್ಷಣ ಮತ್ತು ಉದ್ಯೋಗದಲ್ಲಿ ಇನ್ನು ಎಷ್ಟು ತಲೆಮಾರು ಮುಂದುವರಿಯಬೇಕು ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

ಮರಾಠ ಮೀಸಲಾತಿ ಪ್ರಶ್ನಿಸಿದ ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆಯನ್ನು ಮುಂದಿಟ್ಟಿದೆ. ಮೀಸಲಾತಿಗೆ ಇರುವ ಗರಿಷ್ಠ ಶೇ.50ರ ಮಿತಿಯನ್ನು ತೆಗೆದರೆ ಮುಂದಾಗಬಹುದಾದ ಪರಿಣಾಮದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

ಶೇ. 50 ಮೀಸಲಾತಿ ಬೇಡ ಅಥವಾ ಮೀಸಲಾತಿಗೆ ಮಿತಿಯೇ ಇಲ್ಲ ಎನ್ನುವುದಾದರೆ ಸಮಾನತೆಗೆ ಏನರ್ಥ ಉಳಿಯುತ್ತದೆ?, ಅಸಮಾನತೆ ಹೋಗಲಾಡಿಸುವ ಪರಿ ಏನು?, ಇನ್ನೆಷ್ಟು ತಲೆಮಾರು ಮೀಸಲಾತಿ ಮುಂದುವರಿಯಬೇಕು? ಈ ಬಗ್ಗೆ ನಾವು ವಿಚಾರ ಮಾಡಬೇಕು ಎಂದು ನ್ಯಾಯಮೂರ್ತಿ ಅಶೋಖ್ ಭೂಷಣ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿತು.

ಬದಲಾದ ಸನ್ನಿವೇಶದಲ್ಲಿ ಮಂಡಲ ಆಯೋಗದಂತೆ ಕಲ್ಪಿಸಿರುವ ಮೀಸಲಾತಿ ಮತ್ತು ಮೀಸಲಾತಿಗೆ ಶೇ. 50ರ ಗರಿಷ್ಠ ಮಿತಿ ತೀರ್ಪಿನ ಬಗ್ಗೆ ಮರು ವಿಮರ್ಶೆ ಮಾಡುವ ಅಗತ್ಯ ಇದೆ ಮತ್ತು ಕೆಲಸವನ್ನು ರಾಜ್ಯಗಳಿಗೆ ಬಿಡಬೇಕಾಗಬಹುದು ಎಂದು ಹೇಳಿತು

error: Content is protected !!