ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಎನ್.ವಿ ರಮಣ ಹೆಸರು ಶಿಫಾರಸ್ಸು - BC Suddi
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಎನ್.ವಿ ರಮಣ ಹೆಸರು ಶಿಫಾರಸ್ಸು

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಎನ್.ವಿ ರಮಣ ಹೆಸರು ಶಿಫಾರಸ್ಸು

ದೆಹಲಿ: ಸುಪ್ರೀಂಕೋರ್ಟ್​​ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೋಬ್ಡೆ ಏಪ್ರಿಲ್​ನಲ್ಲಿ ನಿವೃತ್ತಿಯಾಗಲಿದ್ದು, ಅವರ ನಂತರ ಯಾರು ಸಿಜೆಐ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಈ ಮಧ್ಯೆ ಎಸ್​. ಎ.ಬೊಬ್ಡೆ ತಮ್ಮ ಉತ್ತರಾಧಿಕಾರಿಯನ್ನಾಗಿ ಎನ್​. ವಿ.ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಬೋಬ್ಡೆ 2019ರ ನವೆಂಬರ್​ 18ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಏಪ್ರಿಲ್​ 23ರಂದು ನಿವೃತ್ತರಾಗಲಿದ್ದಾರೆ. ನಿಮ್ಮ ಉತ್ತರಾಧಿಕಾರಿಯನ್ನಾಗಿ ಯಾರ ಹೆಸರನ್ನು ಹೇಳುತ್ತೀರಿ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್​ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿದ ಬೋಬ್ಡೆ ಎನ್​​.ವಿ ರಮಣ ಹೆಸರನ್ನು ಸ್ಪಷ್ಟಪಡಿಸಿದ್ದಾರೆ.

‘ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ನನ್ನ ಹೇಳಿಕೆ ಅರ್ಥ ಮಾಡಿಕೊಂಡರೆ ಸಾಕು’ – ಸುಧಾಕರ್

error: Content is protected !!