ಈಗ ಸೆಂಟ್ರಲ್‌ ವಿಸ್ಟಾ ಯೋಜನೆಯ ಅವಶ್ಯಕತೆ ಇಲ್ಲ, ದೃಷ್ಠಿ ಹೊಂದಿರುವ ಸರ್ಕಾರದ ಅಗತ್ಯ ಇದೆ: ರಾಹುಲ್‌ ಗಾಂಧಿ - BC Suddi
ಈಗ ಸೆಂಟ್ರಲ್‌ ವಿಸ್ಟಾ ಯೋಜನೆಯ ಅವಶ್ಯಕತೆ ಇಲ್ಲ, ದೃಷ್ಠಿ ಹೊಂದಿರುವ ಸರ್ಕಾರದ ಅಗತ್ಯ ಇದೆ: ರಾಹುಲ್‌ ಗಾಂಧಿ

ಈಗ ಸೆಂಟ್ರಲ್‌ ವಿಸ್ಟಾ ಯೋಜನೆಯ ಅವಶ್ಯಕತೆ ಇಲ್ಲ, ದೃಷ್ಠಿ ಹೊಂದಿರುವ ಸರ್ಕಾರದ ಅಗತ್ಯ ಇದೆ: ರಾಹುಲ್‌ ಗಾಂಧಿ

ನವದೆಹಲಿ:  ದೇಶದಲ್ಲಿ ಕೊರೊನಾದ ಎರಡನೇ ಅಲೆಯಿಂದಾಗಿ ಸಂಕಷ್ಟದ ಸಂದರ್ಭ ಸೆಂಟ್ರಲ್‌ ವಿಸ್ಟಾ ಯೋಜನೆಯನ್ನು  ಮುಂದುವರೆ ಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಈಗ ಸೆಂಟ್ರಲ್‌ ವಿಸ್ಟಾ ಯೋಜನೆಯ ಅವಶ್ಯಕತೆ ಇಲ್ಲ. ದೃಷ್ಠಿ ಹೊಂದಿರುವ ಸರ್ಕಾರದ ಅಗತ್ಯ ಇದೆ” ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, “ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ, ಸಾಮಾನ್ಯ ಜನರು ಇನ್ನೊಬ್ಬರ ಹೃದಯ ಸ್ಪರ್ಶಿಸುವ ಸಲುವಾಗಿ ಕೈಗಳನ್ನು ಮುಟ್ಟುವ ಅಗತ್ಯವಿಲ್ಲ. ಸಹಾಯ ಮಾಡುವುದನ್ನು ಮುಂದುವರೆಸಿ. ಕುರುಡು ವ್ಯವಸ್ಥೆಯ ವಾಸ್ತವತೆಯನ್ನು ಬಹಿರಂಗಪಡಿಸಿ” ಎಂದು ತಿಳಿಸಿದ್ದಾರೆ.

ಅಕ್ಕಿ ಕೇಳಿದ್ರೆ ‘ಸತ್ತು ಹೋಗಿ’ ಎಂದ ಆಹಾರ ಸಚಿವ : ನೀಚ ಸರ್ಕಾರವೆಂದು ಕಿಡಿಕಾರಿದ ಕಾಂಗ್ರೆಸ್