ಸೋಮವಾರ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ರಮೇಶ್ ಜಾರಕಿಹೊಳಿಗೆ ನೋಟಿಸ್.! - BC Suddi
ಸೋಮವಾರ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ರಮೇಶ್ ಜಾರಕಿಹೊಳಿಗೆ ನೋಟಿಸ್.!

ಸೋಮವಾರ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ರಮೇಶ್ ಜಾರಕಿಹೊಳಿಗೆ ನೋಟಿಸ್.!

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಎಸ್‌ಐಟಿ ಅಧಿಕಾರಿಗಳವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೇ ಜ್ವರದಿಂದಾಗಿ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂಬುದಾಗಿ ಅನಾರೋಗ್ಯದ ಕಾರಣವನ್ನು ಪತ್ರದ ಮೂಲಕ ತಮ್ಮ ವಕೀಲರಿಂದ ಎಸ್‌ಐಟಿಗೆ ತಲುಪಿಸಿದ್ದರು. ಎಸ್‌ಐಟಿ ಅಧಿಕಾರಿಗಳು  ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸಂಬಂಧ ಈಗಾಗಲೇ ಸಿಡಿ ಸಂತ್ರಸ್ತ ಯುವತಿಯ ಪಿಜಿ ಹಾಗೂ ಮಂತ್ರಿ ಅಪಾರ್ಟ್ಮೆಂಟ್ ಸ್ಥಳ ಮಹಜರ್ ಮಾಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯನ್ನು ಕೂಡ ನಡೆಸಲಾಗಿತ್ತು. ಎಸ್‌ಐಟಿ ತಂಡ ಈ ಎಲ್ಲಾ ಪ್ರಕ್ರಿಯೆ ಮುಗಿಸಿದ ನಂತ್ರ, ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದ್ರೇ.. ಜ್ವರದ ಕಾರಣ ಅನಾರೋಗ್ಯದಿಂದಿ ಇಂದು ವಿಚಾರಣೆಗೆ ಹಾಜರಾಗಿರಲಿಲ್ಲ.

error: Content is protected !!