ದಿದಿಗೆ ಧರ್ಮ ಸಂಕಟ : ಆಯೋಗದಿಂದ ನೋಟಿಸ್ - BC Suddi
ದಿದಿಗೆ ಧರ್ಮ ಸಂಕಟ : ಆಯೋಗದಿಂದ ನೋಟಿಸ್

ದಿದಿಗೆ ಧರ್ಮ ಸಂಕಟ : ಆಯೋಗದಿಂದ ನೋಟಿಸ್

ಕೋಲ್ಕತ್ತ: ಧರ್ಮ, ಜಾತಿಯ ಆಧಾರದಲ್ಲಿ ಮತಯಾಚಿಸಿರುವ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದೆ. ಏಪ್ರಿಲ್ 3 ರಂದು ಮುಸ್ಲಿಂ ಮತದಾರರು ತಮ್ಮ ಮತವನ್ನು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿ ವಿಭಜಿಸದಂತೆ ಮನವಿ ಮಾಡಿರುವ ಮಮತಾ ಬ್ಯಾನರ್ಜಿ, ಕೋಮು ನೆಲೆಯಲ್ಲಿ ಎಲ್ಲ ಮತಗಳನ್ನು ತೃಣಮೂಲ ಕಾಂಗ್ರೆಸ್ ಗೆ ನೀಡಬೇಕೆಂದು ಮನವಿ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಹಾಗಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗವು ಹೇಳಿದೆ. ಈ ಹೇಳಿಕೆಗೆ ಕುರಿತಂತೆ 48 ಗಂಟೆಯೊಳಗೆ ವಿವರಣೆ ನೀಡುವಂತೆ ಆದೇಶಿಸಿದೆ. ಅಲ್ಲದೆ ಯಾವುದೇ ಉತ್ತರ ನೀಡದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಮಮತಾ ನೀಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ

error: Content is protected !!