ಹಳೆಯ ವಾಣಿಜ್ಯ ವಾಹನಗಳು ಗುಜರಿಗೆ: ನಿತಿನ್ ಗಡ್ಕರಿ - BC Suddi
ಹಳೆಯ ವಾಣಿಜ್ಯ ವಾಹನಗಳು ಗುಜರಿಗೆ: ನಿತಿನ್ ಗಡ್ಕರಿ

ಹಳೆಯ ವಾಣಿಜ್ಯ ವಾಹನಗಳು ಗುಜರಿಗೆ: ನಿತಿನ್ ಗಡ್ಕರಿ

ಹೊಸದಿಲ್ಲಿ : ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಹೊಸ ಗುಜರಿ ನೀತಿ ಪ್ರಕಟಿಸಿದ್ದು,  ಹದಿನೈದು ವರ್ಷ ಹಳೆಯ ವಾಣಿಜ್ಯ ಮತ್ತು 20 ವರ್ಷ ಹಳೆಯ ವೈಯಕ್ತಿಕ ಬಳಕೆಯ ವಾಹನಗಳನ್ನುಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿ ವೇಳೆ ಶೇ. 5ರಷ್ಟು ರಿಯಾಯಿತಿ ಸಿಗಲಿದೆ ಎಂದು ಹೇಳಿದ್ದಾರೆ.

ಗುಜರಿ ನೀತಿಯಂತೆ, 20 ವರ್ಷ ಪೂರೈಸಿದ ವೈಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಪೂರೈಸಿದ ವಾಣಿಜ್ಯ ಬಳಕೆಯ ವಾಹನಗಳು ಫಿಟ್ನೆಸ್‌ ಪರೀಕ್ಷೆ ಪಾಸಾಗಬೇಕು. ಫೇಲ್‌ ಆದರೆ ಗುಜರಿಗೆ ಹಾಕಿ ಅಲ್ಲಿಂದ ಪ್ರಮಾಣಪತ್ರ ಪಡೆಯಬೇಕು ಎಂದು ಹೇಳಿದ್ದಾರೆ.

error: Content is protected !!