ಕೊರೊನಾ ಕಂಟಕ ಇಂದಿನಿಂದ ನೈಟ್ ಕರ್ಫ್ಯೂ : ಏನಿರುತ್ತೆ..? ಏನಿರಲ್ಲ..? - BC Suddi
ಕೊರೊನಾ ಕಂಟಕ ಇಂದಿನಿಂದ ನೈಟ್ ಕರ್ಫ್ಯೂ : ಏನಿರುತ್ತೆ..? ಏನಿರಲ್ಲ..?

ಕೊರೊನಾ ಕಂಟಕ ಇಂದಿನಿಂದ ನೈಟ್ ಕರ್ಫ್ಯೂ : ಏನಿರುತ್ತೆ..? ಏನಿರಲ್ಲ..?

ಬೆಂಗಳೂರು : ಕೊರೊನಾ ಕೈ ಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಗಲಿದೆ. ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ , ಪಬ್, ಸಿನಿಮಾ ಮಂದಿರ ಬಂದ್ ಆಗಲಿವೆ.

ಒಟ್ಟು 10 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದು, ರಾತ್ರಿ 10 ರಿಂದ 5 ಗಂಟೆವರೆಗೆ ಬಾರ್, ರೆಸ್ಟೋರೆಂಟ್, ಪಬ್, ಡಿಸ್ಕೋತೆಕ್, ಸಿನಿಮಾ ಮಂದಿರಗಳು, ನಾಟಕ ಮಂದಿರಗಳು, ಕೈಗಾರಿಕೆ, ಗಾರ್ಮೆಂಟ್ಸ್, ಹೋಟೆಲ್, ಕ್ಲಬ್ ಗಳು, ರಸ್ತೆಬದಿ ವ್ಯಾಪಾರ, ಗುಂಪುಗೂಡುವುದು, ಸಭೆ-ಸಮಾರಂಭ, ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.

ರಾಜಧಾನಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ತುಮಕೂರು, ಕಲಬುರಗಿ ಜಿಲ್ಲೆಗಳಲ್ಲಿ ಮಾತ್ರ ಕರ್ಫ್ಯೂ ಜಾರಿಯಾಗಲಿದೆ. ಸಾಮಾಜಿಕ ಅಂತರದೊಂದಿಗೆ ಬಸ್ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ. ಆಸ್ಪತ್ರೆ, ಆ್ಯಂಬುಲನ್ಸ್, ಹಣ್ಣು, ಹಾಲು, ತರಕಾರಿ, ಔಷಧಿ ಅಂಗಡಿಗಳು ಸೇವೆ ನೀಡಲಿವೆ.

ಬಾರ್ ಅಂಡ್ ರೆಸ್ಟೋರೆಂಟ್, ಡಿಸ್ಕೊತೆಕ್, ಪಬ್, ಕ್ಲಬ್, ಗಾರ್ಮೆಂಟ್ಸ್, ಕೈಗಾರಿಕೆಗಳು,ಹೋಟೆಲ್, ಸಭೆ-ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು, ಔತಣಕೂಟಗಳು, ಹಾರ್ಡ್ ವೇರ್ ಶಾಪ್, ಮಾಲ್, ಮಾರುಕಟ್ಟೆ,ಬಸ್ ನಿಲ್ದಾಣ, ಜನನಿಬಿಡ ಪ್ರದೇಶಗಳು ಬಂದ್ ಆಗಿರಲಿವೆ.