‘ಮಹಾ’ ಸಂಕಷ್ಟ : ನೈಟ್ ಕರ್ಫ್ಯೂ ಜಾರಿ, ನಿಯಮ ಮೀರಿದರೆ ದಂಡ! - BC Suddi
‘ಮಹಾ’ ಸಂಕಷ್ಟ : ನೈಟ್ ಕರ್ಫ್ಯೂ ಜಾರಿ, ನಿಯಮ ಮೀರಿದರೆ ದಂಡ!

‘ಮಹಾ’ ಸಂಕಷ್ಟ : ನೈಟ್ ಕರ್ಫ್ಯೂ ಜಾರಿ, ನಿಯಮ ಮೀರಿದರೆ ದಂಡ!

ಮುಂಬೈ: ಡೆಡ್ಲಿ ಸೋಂಕು ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದುರಿಂದ ಮಹಾರಾಷ್ಟ್ರ ಇಂದಿನಿಂದ (ಮಾರ್ಚ್ 28) ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಿದೆ. ಮುಂದಿನ ಆದೇಶದವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊವೊವ್ಯಾಕ್ಸ್ನ ಪ್ರಯೋಗ ಕೊನೆಗೂ ಭಾರತದಲ್ಲಿ ಆರಂಭ..!

ಈ ಮಾರ್ಗಸೂಚಿಗಳು ಏಪ್ರಿಲ್ 15ರ ಮಧ್ಯರಾತ್ರಿಯಿಂದಲೇ ಜಾರಿಯಲ್ಲಿರಲಿವೆ. ಒಂದು ವೇಳೆ ಸರ್ಕಾರದ ಈ ನಿಯಮಗಳನ್ನು ಮೀರಿದರೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಐದಕ್ಕಿಂತ ಹೆಚ್ಚು ಜನರು ಸೇರುವುದು ನಿಷೇಧ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ 1 ಸಾವಿರ ರೂ.,ಮಾಸ್ಕ್ ಹಾಕದವರಿಗೆ 500 ರೂ. ದಂಡ ವಿಧಿಸಲು ಆದೇಶ ನೀಡಲಾಗಿದೆ. ಬೀಚ್, ಪಾರ್ಕ್, ಮಾಲ್ ಗಳು, ರೆಸ್ಟೋರೆಂಟ್ ಗಳು ರಾತ್ರಿ 8 ಗಂಟೆಯಿಂದ ಮಾರನೇ ದಿನ ಬೆಳಗ್ಗೆ 7 ಗಂಟೆಯ ವರೆಗೆ ಬಂದ್ ಮಾಡಬೇಕೆಂದು ಸೂಚನೆ ನೀಡಲಾಗಿದೆ.

error: Content is protected !!