LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಸಮಾಜದಲ್ಲಿನ ಶೋಷಣೆ ಅನ್ಯಾಯದ ವಿರುದ್ಧ  ಹೋರಾಟಕ್ಕೆ ಒಂದಾಗೋಣ.!

ಸಮಾಜದಲ್ಲಿನ ಶೋಷಣೆ ಅನ್ಯಾಯದ ವಿರುದ್ಧ  ಹೋರಾಟಕ್ಕೆ ಒಂದಾಗೋಣ.!

ಸಮಾಜದಲ್ಲಿನ ಶೋಷಣೆ ಅನ್ಯಾಯದ ವಿರುದ್ಧ  ಹೋರಾಟಕ್ಕೆ ಒಂದಾಗೋಣ.!

ಚಿತ್ರದುರ್ಗ : ಸಮಾಜದಲ್ಲಿನ ಕುಂದು ಕೊರತೆ, ಶೋಷಣೆ, ಅನ್ಯಾಯದ ವಿರುದ್ದ ಎಲ್ಲರೂ ಒಂದಾಗಿ ಹೋರಾಡೋಣ ಎಂದು ನವ ಕ್ರಾಂತಿ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆರ್.ಪ್ರದೀಪ್ಕುಮಾರ್ ಪದಾಧಿಕಾರಿಗಳಿಗೆ ತಿಳಿಸಿದರು.

ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಮಲ್ಲೇಗೌಡ ಹಾಗೂ ಅಧ್ಯಕ್ಷ ಆಕಾಶ್ ಜಿ.ಎಂ. ಇವರುಗಳ ಪದಗ್ರಹಣ ಸಮಾರಂಭ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಯಲ್ಲಿ ಹುದ್ದೆ ಮುಖ್ಯವಲ್ಲ. ಎಲ್ಲರೂ ಸಮಾನರು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ತೊಂದರೆಯಿರುತ್ತದೆ. ಸಂಘಟನೆಗೆ ಒತ್ತು ಕೊಟ್ಟು ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಹೋರಾಡೋಣ. ನಮ್ಮ ಹೋರಾಟ ಯಾವುದೇ ಒಬ್ಬ ವ್ಯಕ್ತಿಯ ವಿರುದ್ದ ಅಲ್ಲ. ಒಳ್ಳೆಯ ಮಾರ್ಗದಲ್ಲಿ ಸಾಗೋಣ. ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯ, ರೈತರು, ವಿದ್ಯಾರ್ಥಿಗಳ ಸಮಸ್ಯೆ, ಹೀಗೆ ಹತ್ತು ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪದಾಧಿಕಾರಿಗಳ ಮೇಲೆ ಜವಾಬ್ದಾರಿಯಿದೆ ಎಂದು ಹೇಳಿದರು.

ಹೋರಾಟಗಾರರಿಗೆ ಸಮಯ ಪಾಲನೆ, ಬದ್ದತೆ ಮುಖ್ಯ. ಜಿಲ್ಲೆಯಾದ್ಯಂತ ತಾಲ್ಲೂಕು ಸಮಿತಿಗಳನ್ನು ರಚಿಸಿ ವೇದಿಕೆಯನ್ನು ಬಲಪಡಿಸೋಣ ಎಂದು ಆರ್.ಪ್ರದೀಪ್ಕುಮಾರ್  ಕರೆ ನೀಡಿದರು.

ನವ ಕ್ರಾಂತಿ ರಕ್ಷಣಾ ವೇದಿಕೆ ರಾಜ್ಯ ಗೌರವಾಧ್ಯಕ್ಷ ಪಿ.ಮಹಂತೇಶ್ ಮಾತನಾಡಿ ಹೋರಾಟವೆಂದರೆ ಯಾವಾಗಲೂ ಸತ್ಯದ ಪರವಾಗಿರಬೇಕು. ಶೋಷಿತರು, ನೊಂದವರು

ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಮ್ಮ ಹೋರಾಟವಿರಬೇಕು. ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಒಗ್ಗಟ್ಟಿನಿಂದಿದ್ದಾಗ ಮಾತ್ರ ಸಂಘಟನೆಗೆ ಶಕ್ತಿ ಬರುತ್ತದೆಂದು ನುಡಿದರು.

ಬಾಗೋಡಿಸ್ವಾಮಿ, ಉಪಾಧ್ಯಕ್ಷ ಹನುಮಂತರಾಯ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ, ಕಾರ್ಯದರ್ಶಿ ವರುಣ್ಕುಮಾರ್, ಕಾನೂನು ಸಲಹೆಗಾರ ಧನಂಜಯ, ಮಾಧ್ಯಮ ಸಲಹೆಗಾರ ವಸಂತ, ಸಂಘಟನಾ ಕಾರ್ಯದರ್ಶಿ ವಿನಾಯಕ, ಉಪಾಧ್ಯಕ್ಷ ಕೀರ್ತಿಕುಮಾರ್, ಮಂಜುನಾಥ, ರಾಜ್ಯ ಸಹ ಕಾರ್ಯದರ್ಶಿ ನವೀನ್ಕುಮಾರ್ ಎಂ, ಸಂಘಟನಾ ಕಾರ್ಯದರ್ಶಿ ನಿಂಗರಾಜ್ ಇ, ರಾಜ್ಯ ಸಮಿತಿ ನಿರ್ದೇಶಕರುಗಳಾದ ಡಿ.ಸಿ.ವಿನಯ್, ಸಾಮಾಜಿಕ ಹೋರಾಟಗಾರ ವೆಂಕಟೇಶ್ಬಾಬು, ಸತೀಶ್ಕುಮಾರ್, ಪ್ರದೀಪ್ಕುಮಾರ್ ಆಚಾರ್, ಕರಿಯಪ್ಪ, ಎಂ.ಎಸ್.ನವೀನ್ಕುಮಾರ್, ಕೆ.ಮನೋಜ್, ಮಂಜು ಕೆ, ಕಿರಣ್ ಡಿ, ನಗರಾಧ್ಯಕ್ಷ ಮಂಜುನಾಥ್ ಟಿ.ಎನ್. ಇವರುಗಳು ಪದಗ್ರಹಣ ಸಮಾರಂಭದಲ್ಲಿ ಹಾಜರಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST