LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ದೀಪಾವಳಿ ಹಬ್ಬದ ಗಿಫ್ಟ್: ಜಿಲ್ಲೆಯ ಗೃಹಲಕ್ಷ್ಮಿಯರಿಗೆ 3 ಕಂತಿನ ಹಣ ಬಿಡುಗಡೆ..!

ದೀಪಾವಳಿ ಹಬ್ಬದ ಗಿಫ್ಟ್: ಜಿಲ್ಲೆಯ ಗೃಹಲಕ್ಷ್ಮಿಯರಿಗೆ 3 ಕಂತಿನ ಹಣ ಬಿಡುಗಡೆ..!

 

ಚಿತ್ರದುರ್ಗ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, 2026-27ನೇ ಸಾಲಿನ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಸೇರಿದಂತೆ ಒಟ್ಟು ಮೂರು ಕಂತುಗಳ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ ತಿಳಿಸಿದ್ದಾರೆ.

  ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿರುವ 3,80,363 ಫಲಾನುಭವಿಗಳಿಗೆ 34, 35 ಹಾಗೂ 36ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ. ಪ್ರತಿ ತಿಂಗಳಿಗೆ ರೂ. ರೂ. 76.07 ಕೋಟಿ ವೆಚ್ಚವಾಗಲಿದ್ದು, ಮೂರು ತಿಂಗಳ ರೂ.228.17 ಕೋಟಿ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದರು.

  ಬರಗಾಲದ ಭೀತಿಯಿಂದಾಗಿ ಸಂಕಷ್ಟದಲ್ಲಿದ್ದ ಜಿಲ್ಲೆಯ ಜನತೆಗೆ ಹಬ್ಬ ಆಚರಿಸಲು ಈ ಹಣ ಆಸರೆಯಾಗಲಿದೆ. ಮೂರು ಕಂತುಗಳ ಒಟ್ಟು ಮೊತ್ತವಾಗಿ ಪ್ರತಿ ಫಲಾನುಭವಿಗೆ ರೂ. 6,000 ಸಿಗಲಿದೆ. ಇಂದಿನಿಂದಲೇ ಹಣ ಜಮೆಯಾಗುವ ಪ್ರಕ್ರಿಯೆ ಆರಂಭಗೊಂಡಿದ್ದು, ಶೀಘ್ರದಲ್ಲಿಯೇ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ ಮೊತ್ತ ತಲುಪಲಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ ತಿಳಿಸಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾತಕಗಳ ಪ್ರಕಾರ ಯಾವ ಗ್ರಹಗತಿಗಳ ತಾಂತ್ರಿಕ ಶಕ್ತಿಯಿಂದ ಆರೋಗ್ಯ ಸಮಸ್ಯೆ ಮಾನಸಿಕ ಖಿನ್ನತೆ ಹೆಚ್ಚಾಗುತ್ತದೆ ತಿಳಿದುಕೊಳ್ಳಿ!ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ..!ಐಪಿಎಲ್‌ನಿಂದ ಧೋನಿ ನಿವೃತ್ತಿ ಘೋಷಿಸಿದ್ದಾರೆ.!ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಶಿವಮೂರ್ತಿ ಕಸ್ಟಡಿ..!ಪ್ರೆವೆಂಟ್ ಶೋಯಿಂಗ್ ಬೆಳೆ ವಿಮೆ ತುರ್ತಾಗಿ ನೀಡುವಂತೆ ರೈತ ಸಂಘ ಒತ್ತಾಯ..!ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆಎಸ್.ಟಿ ಯುವಕರಿಗೆ ಸೋಲಾರ್ ಪಿವಿ ತರಬೇತಿಗೆ ಅರ್ಜಿ ಆಹ್ವಾನ18-11-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ-ಸತ್ಯಕ್ಕ  ಅವರ ವಚನ.ವಾಮಾಚಾರಕ್ಕೆ ಮಾಟ ಮಂತ್ರ ದೂಷಕ್ಕೆ ಶತ್ರು ದೃಷ್ಟಿಗೆ ಜನ ದೃಷ್ಟಿಗೆ ದೃಷ್ಟಿಯಿಂದ ಈ ಶಕ್ತಿಶಾಲಿ ಯಂತ್ರವನ್ನು ಧಾರಣೆ ಮಾಡಿ!