LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ನಟ ಅಲ್ಲು ಅರ್ಜುನ್  ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ.!

 

ಹೈದರಾಬಾದ್‌:  ಆರ್‌ಟಿಸಿ ಕ್ರಾಸ್‌ರೋಡ್ಸ್ ಸಮೀಪದ ಸಂಧ್ಯಾ ಥಿಯೇಟರ್‌ನಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಳ್ಳಿ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್  ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ನ್ಯಾಯಾಲಯದ ಆದೇಶದಂತೆ, 2026ರ ಜೂನ್ 22ರಂದು (ಸೋಮವಾರ) ನಡೆಯಲಿರುವ ವಿಚಾರಣೆಗೆ ಅಲ್ಲು ಅರ್ಜುನ್ ವೈಯಕ್ತಿಕವಾಗಿ ಹಾಜರಾಗಬೇಕು.

‘ಪುಷ್ಪ 2′ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದ್ದರು. ಈ ವೇಳೆ ನಟನನ್ನು ನೋಡಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಈ ದುರ್ಘಟನೆಯಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದು, ಅವರ ಪುತ್ರ ಶ್ರೀತೇಜ್ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆ ಬಳಿಕ ಇತ್ತೀಚೆಗೆ ಶ್ರೀತೇಜ್ ಮನೆಗೆ ಮರಳಿದ್ದಾನೆ.

ಈ ಪ್ರಕರಣದಲ್ಲಿ ಒಟ್ಟು 23 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ಎಲ್ಲರಿಗೂ ನಾಂಪಳ್ಳಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಅಲ್ಲು ಅರ್ಜುನ್ ಈ ಪ್ರಕರಣದಲ್ಲಿ A11 ಆರೋಪಿಯಾಗಿ ಹೆಸರು ಪಡೆದಿದ್ದಾರೆ. A1ರಿಂದ A10ರವರೆಗಿನ ಆರೋಪಿಗಳು ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯಾಗಿದ್ದಾರೆ.

ಜೂನ್ 22ರಂದು ಎಲ್ಲಾ ಆರೋಪಿಗಳು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅವರ ಹಾಜರಾತಿಯ ನಂತರ ಪ್ರಕರಣದ ವಿಚಾರಣೆ (ಟ್ರಯಲ್) ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು 23 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.ಗಮನಾರ್ಹವಾಗಿ, 2024ರ ಡಿಸೆಂಬರ್ 4ರಂದು ಪುಷ್ಪ-2: The Rule ಚಿತ್ರದ ಬಿಡುಗಡೆ ಸಂದರ್ಭದಲ್ಲಿ ನಡೆದ ಈ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೇ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದ್ದು, ಒಂದು ರಾತ್ರಿ ಜೈಲಿನಲ್ಲಿ ಕಳೆದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇವಲ ಅರಳಿ ಮರವನ್ನು ಮುಟ್ಟುತ್ತಾ ಈ ಚಿಕ್ಕ ಮಂತ್ರ ಹೇಳಿದರೆ ಯಾವುದೇ ಇಚ್ಛೆ ಇದ್ದರೂ ಈಡೇರುತ್ತದೆ..!ಏಳು ಜನ ಹಿರಿಯ ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ.! ಹೆಚ್ಚುವರಿ ಜವಾಬ್ದಾರಿಚಿತ್ರದುರ್ಗ: ನಾಳೆ  ಜಿಟಿಟಿಸಿ: ಜುಲೈ 22ರಂದು ಉದ್ಯೋಗ ಮೇಳಕ್ರೀಡಾಪಟುಗಳ ಪ್ರೋತ್ಸಾಹಧನ, ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 21-07-2026ವಚನ.: --ಸಿದ್ಧರಾಮೇಶ್ವರಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ:  -ಜಿಲ್ಲಾ ನ್ಯಾಯಾಧೀಶ ಜಿ.ಡಿ.ಮಹಾವರ್ಕರ್ಈ ಕಾರಣಕ್ಕೆ ಗಣಿ ಇಲಾಖೆಯಲ್ಲಿ ಮೇಜರ್ ಸರ್ಜರಿ ಶೇ.80ರಷ್ಟು ಸಿಬ್ಬಂದಿ ವರ್ಗಾವಣೆ.!ದೃಷ್ಟಿ ನರಘೋಷ ಮಹಾನಿವಾರಣ ಯಂತ್ರದ ಮಹತ್ವವೇನು ಯಂತ್ರದಿಂದ ನರ ದೃಷ್ಟಿ ದೋಷ ಶತ್ರು ದೃಷ್ಟಿ ದೋಷ ಹೇಗೆ ಪರಿಹಾರ!?ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ವಿಪಕ್ಷಗಳ ಲೆಕ್ಕಾಚಾರ ಏನು.?