ಆಂಧ್ರಪ್ರದೇಶ : ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಕೈಕಲೂರು ಮಂಡಲದಲ್ಲಿ ರಸ್ತೆಯಲ್ಲಿದ್ದ ಗುಂಡಿಯೊಂದು ಪವಾಡಸದೃಶ ರೀತಿಯಲ್ಲಿ ಮಹಿಳೆಯೊಬ್ಬರಿಗೆ ಮರುಜೀವ ನೀಡಿದ ವಿಚಿತ್ರ ಹಾಗೂ ಆಶ್ಚರ್ಯಕರ ಘಟನೆ ವರದಿಯಾಗಿದೆ.
ಮಾರ್ಗಮಧ್ಯೆ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯೊಂದಕ್ಕೆ ಆಂಬ್ಯುಲೆನ್ಸ್ ಏಕಾಏಕಿ ಬಿದ್ದ ಪರಿಣಾಮ ಭಾರಿ ಪ್ರಮಾಣದ ಆಘಾತ (ಜರ್ಕ್) ಉಂಟಾಯಿತು. ಈ ಜೋರಾದ ಕುಲುಕಾಟದ ಬೆನ್ನಲ್ಲೇ ರಾಮತುಳಸಿ ಅವರ ದೇಹದಲ್ಲಿ ದಿಢೀರ್ ಚಲನೆ ಕಾಣಿಸಿಕೊಂಡಿದೆ! ಅಲ್ಲದೆ, ಅವರು ಉಸಿರಾಡಲು ಪ್ರಾರಂಭಿಸಿದ್ದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಜಾಗರೂಕರಾಗಿ ಆಂಬ್ಯುಲೆನ್ಸ್ ಅನ್ನು ಹತ್ತಿರದ ಆಸ್ಪತ್ರೆಗೆ ತಿರುಗಿಸಿದರು.
ವೈದ್ಯರ ತಪಾಸಣೆ: ಆಸ್ಪತ್ರೆಯ ವೈದ್ಯರು ಪುನಃ ಪರೀಕ್ಷೆ ನಡೆಸಿದಾಗ ಮಹಿಳೆ ಜೀವಂತವಾಗಿರುವುದು ದೃಢಪಟ್ಟಿದ್ದು, ತಕ್ಷಣವೇ ತುರ್ತು ಚಿಕಿತ್ಸೆ ನೀಡಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದು, ಸಾಮಾನ್ಯ ಸ್ಥಿತಿಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಈ ಅಪರೂಪದ ಘಟನೆ ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದ್ದು, ವೈದ್ಯಕೀಯವಾಗಿ ಇದು ಹೇಗೆ ಸಾಧ್ಯವಾಯಿತು ಎಂಬ ಚರ್ಚೆಗಳು ನಡೆಯುತ್ತಿವೆ. ಘಟನೆಗೆ ಸಂಬಂಧಿಸಿದಂತೆ ವೈದ್ಯರಿಂದ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಬರಬೇಕಿದೆ.