ನೀವು ಈ ಬ್ಯಾಂಕಿನ ಗ್ರಾಹಕರಾದವರು ಓದಲೇ ಬೇಕಾದ ಸುದ್ದಿ - BC Suddi
ನೀವು ಈ ಬ್ಯಾಂಕಿನ ಗ್ರಾಹಕರಾದವರು ಓದಲೇ ಬೇಕಾದ ಸುದ್ದಿ

ನೀವು ಈ ಬ್ಯಾಂಕಿನ ಗ್ರಾಹಕರಾದವರು ಓದಲೇ ಬೇಕಾದ ಸುದ್ದಿ

 

ನವದೆಹಲಿ : ಏಪ್ರಿಲ್ 1ರಿಂದ ಏಳು ಬ್ಯಾಂಕ್ ಗಳ ಚೆಕ್ ಬುಕ್ ಗಳು ಮತ್ತು ಪಾಸ್ ಬುಕ್ ಗಳು ಅಮಾನ್ಯವಾಗುವುದರಿಂದ ಬ್ಯಾಂಕ್ ಖಾತೆದಾರರಿಗೆ ಬದಲಾವಣೆಗಳಾಗಲಿವೆ.

ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ ಗಳು ವಿಲೀನ ವಾಗಲಿದ್ದು, ಈ ಬ್ಯಾಂಕ್ ಗಳಲ್ಲಿ ಗ್ರಾಹಕರು ಖಾತೆ ಹೊಂದಿದ್ದರೆ. ತಕ್ಷಣ ಹೊಸ ಚೆಕ್ ಬುಕ್ ಮತ್ತು IFSC ಕೋಡ್ ಅನ್ನು ಪರಿಶೀಲಿಸಿ.

ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡಾದೊಂದಿಗೆ ಏಪ್ರಿಲ್ 1, 2019 ರಂದು ವಿಲೀನಗೊಂಡವು. ಏಪ್ರಿಲ್ 1ರಿಂದ ಬ್ಯಾಂಕ್ ಆಫ್ ಬರೋಡಾದ ಚೆಕ್ ಬುಕ್ ಮತ್ತು ಪಾಸ್ ಬುಕ್ ಗಳು ಮಾತ್ರ ಅದರಲ್ಲಿ ಕಾರ್ಯನಿರ್ವಹಿಸಲಿವೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಜತೆ ವಿಲೀನಗೊಂಡವು. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಲೀನಗೊಂಡ ಎರಡು ಬ್ಯಾಂಕ್ ಗಳ ಚೆಕ್ ಬುಕ್ ಗಳು 2021ರ ಮಾರ್ಚ್ 31ರವರೆಗೆ ಮಾತ್ರ ಸಿಂಧುತ್ವ ಹೊಂದಿರುವುದಾಗಿ ಪ್ರಕಟಿಸಿದೆ.

ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಖಾತೆದಾರರು ಈಗ ತಮ್ಮ ಹೊಸ IFSC ಕೋಡ್ ಗಳನ್ನು ಬ್ಯಾಂಕ್ ಗಳ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದಕ್ಕಾಗಿ, ಗ್ರಾಹಕನು ಅಧಿಕೃತ ವೆಬ್ಸೈಟ್ಗೆ www.unionbankofindia.co.in . ಭೇಟಿ ನೀಡಿ. ಬಳಿಕ ನೀವು ಇಲ್ಲಿ ಅಮಾಲ್ಗೇಶನ್ ಸೆಂಟರ್ ಕ್ಲಿಕ್ ಮಾಡಬೇಕು. ಇದಾದ ನಂತರ, ನೀವು IFSC ಕೋಡ್ ಅನ್ನು ಅಪ್ ಡೇಟ್ ಮಾಡಲು ಸಾಧ್ಯವಾಗುತ್ತದೆ. ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆ 1800-208-2244 ಅಥವಾ 1800-425-1515 ಅಥವಾ 1800-425-3555 ಗೆ ಕರೆ ಮಾಡಬಹುದು. ಅಥವಾ ಎಸ್ ಎಂಎಸ್ ಮೂಲಕ ಮಾಹಿತಿ ಪಡೆಯಬಹುದು. ಇದಕ್ಕಾಗಿ ನೀವು IFSC <OLD IFSC > ಟೈಪ್ ಮಾಡಿ 9223008486 ಗೆ ಸಂದೇಶ ಕಳುಹಿಸಬೇಕು.

ಆದರೆ, ಕೆನರಾ ಬ್ಯಾಂಕ್ ವಿಲೀನದ ನಂತರ ಸಿಂಡಿಕೇಟ್ ಬ್ಯಾಂಕ್ ನ ಚೆಕ್ ಬುಕ್ ನ ವಿಲೀನ ಅವಧಿಯನ್ನು 2021ರ ಜೂನ್ 30ರವರೆಗೆ ಮುಂದೂಡಲಾಗಿದೆ. ಇದಲ್ಲದೆ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗಳನ್ನು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲಾಗಿದೆ. ಅಲಹಾಬಾದ್ ಬ್ಯಾಂಕ್ ಅನ್ನು ಸರ್ಕಾರ ಇಂಡಿಯನ್ ಬ್ಯಾಂಕ್ ನೊಂದಿಗೆ ವಿಲೀನಮಾಡಿದೆ.

 

 

error: Content is protected !!