ಭವಿಷ್ಯ ನಿಧಿ ಖಾತೆದಾರರು ಓದಲೇ ಬೇಕಾದ ಸುದ್ದಿ.! - BC Suddi
ಭವಿಷ್ಯ ನಿಧಿ ಖಾತೆದಾರರು ಓದಲೇ ಬೇಕಾದ ಸುದ್ದಿ.!

ಭವಿಷ್ಯ ನಿಧಿ ಖಾತೆದಾರರು ಓದಲೇ ಬೇಕಾದ ಸುದ್ದಿ.!

 

ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಮಾಹಿತಿ ನೀಡಿದ್ದು, ಭವಿಷ್ಯ ನಿಧಿಗೆ ವಾರ್ಷಿಕ ಹೂಡಿಕೆ ಮೀತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷಕ್ಕೆ ಏರಿಕೆ ಮಾಡಿ, ತೆರಿಗೆ ವಿನಾಯಿತಿಯನ್ನು ವಿಸ್ತರಿಸಿರುವುದಾಗಿ ತಿಳಿಸಿದ್ದಾರೆ. ಈ ವಿನಾಯಿತಿಯು ಪಿಎಫ್ ಗೆ ಉದ್ಯೋಗಾದಾತರು ಕೊಡುಗೆ ನೀಡದೇ ಇರುವ ಕೇಸ್ ಗಳಿಗೆ ಅನ್ವಯಿಸುತ್ತದೆಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಭವಿಷ್ಯ ನಿಧಿ ಖಾತೆದಾರರು ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ ಖಾತೆಯಲ್ಲಿ ವಾರ್ಷಿಕವಾಗಿ ಇಡಬಹುದಾದ ಠೇವಣಿ ಮಿತಿಯನ್ನು 5 ಲಕ್ಷ ರೂ.ವರೆಗೆ ಹೆಚ್ಚಳ ಮಾಡಿದೆ.

ಫೆ. 1 ರಂದು ಕೇಂದ್ರ ಮುಂಗಡ ಪತ್ರ ಮಂಡಿಸುವ ವೇಳೆ ಅವರು ಉದ್ಯೋಗಿಗಳು ವಾರ್ಷಿಕ 2.5 ಲಕ್ಷ ರೂ.ಗಿಂತ ಹೆಚ್ಚು ಪಿಎಫ್ ಗೆ ಹೂಡಿಕೆ ಮಾಡಿದರೆ ಏಪ್ರಿಲ್ 1 ರಿಂದ ಅಂತಹ ಹೂಡಿಕೆಗೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದರು. ಈ ಬದಲಾವಣೆಯಿಂದ ತೆರಿಗ ಪಾವತಿಸಬೇಕಾದವರು ಶೇ. 1 ರಷ್ಟು ಜನಮಾತ್ರ. ಉಳಿದವರ ಹೂಡಿಕೆ 2.5 ಲಕ್ಷದೊಳಗೇ ಇರುವ ಕಾರಣ ಅವರಿಗೆ ಯಾವುದೇ ತೊಂದರೆ ಆಗಲಾರದು ಎಂದು ಹೇಳಿದ್ದಾರೆ.

 

 

error: Content is protected !!