ಕೋವಿಡ್ ಕಂಟಕ : ಭಾರತದ ಪ್ರಯಾಣಿಕರ ಪ್ರವೇಶಕ್ಕೆ ಬ್ರೇಕ್ ಹಾಕಿದ ನ್ಯೂಜಿಲೆಂಡ್ - BC Suddi
ಕೋವಿಡ್ ಕಂಟಕ : ಭಾರತದ ಪ್ರಯಾಣಿಕರ ಪ್ರವೇಶಕ್ಕೆ ಬ್ರೇಕ್ ಹಾಕಿದ ನ್ಯೂಜಿಲೆಂಡ್

ಕೋವಿಡ್ ಕಂಟಕ : ಭಾರತದ ಪ್ರಯಾಣಿಕರ ಪ್ರವೇಶಕ್ಕೆ ಬ್ರೇಕ್ ಹಾಕಿದ ನ್ಯೂಜಿಲೆಂಡ್

ವೆಲ್ಲಿಂಗ್ಟಂನ್ : ದಿನದಿಂದ ದಿನಕ್ಕೆ ಕೊರೊನಾ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ದೇಶದ ಪ್ರಜೆಗಳು ಸೇರಿದಂತೆ ಭಾರತದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರ ಪ್ರವೇಶಕ್ಕೆ ನ್ಯೂಜಿಲೆಂಡ್ ತಾತ್ಕಾಲಿಕ ನಿಷೇಧಿ ಹೇರಿದೆ. ಈ ಕುರಿತು ಆದೇಶ ಹೊರಡಿಸಿರುವ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್ ಈ ಆದೇಶ ಏಪ್ರಿಲ್ 11ರಿಂದ (ಭಾನುವಾರ) ಜಾರಿಯಾಗಲಿದ್ದು, ಏಪ್ರಿಲ್ 28ರವರೆಗೆ ಭಾರತದಿಂದ ಯಾವುದೇ ಪ್ರಯಾಣಿಕರು ನ್ಯೂಜಿಲೆಂಡ್ ಪ್ರವೇಶಿಸುವಂತಿಲ್ಲ ಎಂದು ಜೆಸಿಂಡಾ ತಿಳಿಸಿದ್ದಾರೆ.

ಭಾರತದಿಂದ ಆಗಮಿಸುವ ಪ್ರಯಾಣಿಕರ ಮರು ಆಗಮನಕ್ಕೆ ಸಂಬಂಧಿಸಿದಂತೆ ಕೋವಿಡ್ ಸೋಂಕು ಕುರಿತು ನಿರಂತರವಾಗಿ ಪರಿಶೀಲನೆ ನಡೆಸಿದ ನಂತರ ನಿರ್ಬಂಧವನ್ನು ತೆರವುಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ನಿರ್ಧಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ಅರ್ಡೆರ್ನ್ ತಿಳಿಸಿದ್ದಾರೆ.

ಸಾರಿಗೆ ಮುಷ್ಕರ: ‘ಅವಶ್ಯಕತೆ ಇದ್ದರೆ ಸೇನೆಯಿಂದ ಚಾಲಕರನ್ನು ಕರೆಸುತ್ತೇವೆ’ – ಅಂಜುಂ

error: Content is protected !!