ನೇಪಾಳದಲ್ಲಿ ನೂತನ ಸರ್ಕಾರ ರಚನೆಗೆ ನಿರ್ಧರಿಸಿದ ನೇಪಾಳಿ ಕಾಂಗ್ರೆಸ್‌ - BC Suddi
ನೇಪಾಳದಲ್ಲಿ ನೂತನ ಸರ್ಕಾರ ರಚನೆಗೆ ನಿರ್ಧರಿಸಿದ ನೇಪಾಳಿ ಕಾಂಗ್ರೆಸ್‌

ನೇಪಾಳದಲ್ಲಿ ನೂತನ ಸರ್ಕಾರ ರಚನೆಗೆ ನಿರ್ಧರಿಸಿದ ನೇಪಾಳಿ ಕಾಂಗ್ರೆಸ್‌

ಕಠ್ಮಂಡು : ನೇಪಾಳದ ಪ್ರಮುಖ ವಿಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್‌ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಪದಚ್ಯುತಿಗೊಳಿಸಿ, ತನ್ನ ನಾಯಕತ್ವದ ನೂತನ ಸರ್ಕಾರವನ್ನು ರಚಿಸಲು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಕ್ಷದ ಹಿರಿಯ ನಾಯಕ ಪ್ರಕಾಶ್ ಮಾನ್ ಸಿಂಗ್‌, ”ಶನಿವಾರ ನೇಪಾಳಿ ಕಾಂಗ್ರೆಸ್‌ನ ಕೇಂದ್ರೀಯ ಕಾರ್ಯಕಾರಿ ಸಮಿತಿಯು ತುರ್ತು ಸಭೆ ನಡೆಸಿದ್ದು ತನ್ನ ನೇತೃತ್ವದ ನೂತನ ಸರ್ಕಾರದ ರಚನೆಗೆ ಕಾರ್ಯತಂತ್ರ ರೂಪಿಸಲು ತೀರ್ಮಾನಿಸಿದೆ.

ಸಿಪಿಎನ್- ಮಾವೋಯಿಸ್ಟ್ ಸೆಂಟರ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಪರ್ಯಾಯ ಸರ್ಕಾರ ರಚಿಸಲಾಗುವುದು” ಎಂದು ಘೋಷಣೆ ಮಾಡಿದ್ದಾರೆ. ಹಾಗೆಯೇ ನೇಪಾಳಿ ಕಾಂಗ್ರೆಸ್‌ ಪ್ರಧಾನಿ ಓಲಿ ಅವರನ್ನು ಅಧಿಕಾರದಿಂದ ಕೆಳಗಿಯಲು ಒತ್ತಾಯಿಸಿದ್ದು ”ಓಲಿ ರಾಜೀನಾಮೆ ನೀಡದಿದ್ದರೆ ಪ್ರತಿನಿಧಿ ಸಭಾದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ” ಎಂದು ನೇಪಾಳಿ ಕಾಂಗ್ರೆಸ್‌ ಹೇಳಿದೆ.

 

error: Content is protected !!