ಈ ಕಾರ್ಯಾಚರಣೆಯಲ್ಲೇ ಸುಮಾರು 25-30 ನಕ್ಸಲರನ್ನು ಹೊಡೆದುರುಳಿಸಲಾಗಿದೆ : ಸಿಆರ್‌ಪಿಎಫ್‌ ಮುಖ್ಯಸ್ಥ - BC Suddi
ಈ ಕಾರ್ಯಾಚರಣೆಯಲ್ಲೇ ಸುಮಾರು 25-30 ನಕ್ಸಲರನ್ನು ಹೊಡೆದುರುಳಿಸಲಾಗಿದೆ : ಸಿಆರ್‌ಪಿಎಫ್‌ ಮುಖ್ಯಸ್ಥ

ಈ ಕಾರ್ಯಾಚರಣೆಯಲ್ಲೇ ಸುಮಾರು 25-30 ನಕ್ಸಲರನ್ನು ಹೊಡೆದುರುಳಿಸಲಾಗಿದೆ : ಸಿಆರ್‌ಪಿಎಫ್‌ ಮುಖ್ಯಸ್ಥ

ನವದೆಹಲಿ : ಛತ್ತೀಸ್ ಘಡದಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ, ”ಈ ಕಾರ್ಯಾಚರಣೆಯಲ್ಲೇ ಸುಮಾರು 25-30 ನಕ್ಸಲರನ್ನು ಹೊಡೆದುರುಳಿಸಲಾಗಿದೆ” ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಮಹಾನಿರ್ದೇಶಕ ಮುಖ್ಯಸ್ಥ ಕುಲದೀಪ್ ಸಿಂಗ್‌ ಅವರು ತಿಳಿಸಿದ್ದಾರೆ.

ಛತ್ತೀಸ್ ಘಡದಲ್ಲಿ ನಕ್ಸಲ್ ದಾಳಿಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುತ್ತಿರುವ ಅವರು ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ”ನಕ್ಸಲರ ವಿರುದ್ದ ನಡೆಸಿದ ಕಾರ್ಯಾಚರಣೆ ಅಥವಾ ಗುಪ್ತಚರ ವೈಫಲ್ಯವಾಗಿದೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಕಾರ್ಯಾಚರಣೆಯಾಗಲಿ ಅಥವಾ ಗುಪ್ತಚರವಾಗಲಿ ವೈಫಲ್ಯವಾಗಿಲ್ಲ. ಅಷ್ಟಕ್ಕೂ ಗುಪ್ತಚರ ವೈಫಲ್ಯವಾಗಿದ್ದರೆ, ಕಾರ್ಯಾಚರಣೆಯನ್ನು ನಡೆಸುತ್ತಿರಲಿಲ್ಲ. ಕಾರ್ಯಾಚರಣೆ ವೈಫಲ್ಯವಾಗಿದ್ದರೆ ಅನೇಕ ನಕ್ಸಲರು ಹತರಾಗುತ್ತಿರಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

”ನಕ್ಸಲರು ಶವಗಳನ್ನು ಮತ್ತು ಗಾಯಗೊಂಡವರನ್ನು ಸಾಗಿಸಲು ಮೂರು ಟ್ರಾಕ್ಟರ್‌ಗಳನ್ನು ಬಳಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಹಾಗಿರುವಾಗ ಎಷ್ಟು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಹೇಳುವುದು ಕಷ್ಟ ಆದರೆ ಕನಿಷ್ಠ 25-30 ನಕ್ಸಲರು ಹತರಾಗಿದ್ದು ನಿಖರ ಮಾಹಿತಿ ಕಲೆ ಹಾಕಲಾಗುವುದು. ಹಾಗೆಯೇ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈನಿಕರನ್ನು ಸೋಮವಾರ ಭೇಟಿಯಾಗುತ್ತೇನೆ” ಎಂದರು.

‘ನಾನು ಏಳು ಬಾರಿ ಸಂಸದೆಯಾಗಿದ್ದೇನೆ. ಆದರೆ ಇಂತಹ ಕೆಟ್ಟ ಪ್ರಧಾನಿ, ಗೃಹ ಸಚಿವರನ್ನು ಎಂದಿಗೂ ನೋಡಿಲ್ಲ: ಮೋದಿ, ಶಾ ವಿರುದ್ದ ದೀದಿ ಕಿಡಿ

error: Content is protected !!