ವಿವಾದ ಸೃಷ್ಟಿಸಿದ ತಸ್ಲೀಮಾ ನಸ್ರೀನ್ ಟ್ವೀಟ್ : ರೀ ಟ್ವೀಟ್ ನಲ್ಲಿ ಜೋಫ್ರಾ ಆರ್ಚರ್ ಹೇಳಿದೇನು? - BC Suddi
ವಿವಾದ ಸೃಷ್ಟಿಸಿದ ತಸ್ಲೀಮಾ ನಸ್ರೀನ್ ಟ್ವೀಟ್ : ರೀ ಟ್ವೀಟ್ ನಲ್ಲಿ ಜೋಫ್ರಾ ಆರ್ಚರ್ ಹೇಳಿದೇನು?

ವಿವಾದ ಸೃಷ್ಟಿಸಿದ ತಸ್ಲೀಮಾ ನಸ್ರೀನ್ ಟ್ವೀಟ್ : ರೀ ಟ್ವೀಟ್ ನಲ್ಲಿ ಜೋಫ್ರಾ ಆರ್ಚರ್ ಹೇಳಿದೇನು?

ಢಾಕಾ : ಕೆಲವರು ಕೆಲವು ಸಂದರ್ಭಗಳಲ್ಲಿ ಮಾಡುವ ಟ್ವೀಟ್ ಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿಬಿಡುತ್ತವೆ. ಆ ಒಂದು ಟ್ವೀಟ್ ಒಂದು ಸಮುದಾಯ ಒಂದು ಸಂಘಟನೆ ಸೇರಿದಮತೆ ಒಂದು ಕೋಮಿನ ಜನರನ್ನು ದಂಗೆ ಎಳುವಂತೆ ಮಾಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ.

ಸದ್ಯ ಇದೇ ಸರದಿಯಲ್ಲಿ ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುವ ಬಾಂಗ್ಲಾದೇಶ ಲೇಖಕಿ ತಸ್ಲೀಮಾ ನಸ್ರೀನ್ ಇದೀಗ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಮೊಯಿನ್ ಅಲಿ ಬಗ್ಗೆ ಮಾತನಾಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಮೊಯಿನ್ ಅಲಿ ಒಂದೊಮ್ಮೆ ಕ್ರಿಕೆಟ್ ನೊಂದಿಗೆ ಸಂಬಂಧ ಹೊಂದಿರದೆ ಹೋಗಿದ್ದರೆ ಸಿರಿಯಾಗೆ ತೆರಳಿ ಇಸಿಸ್ ಸೇರುತ್ತಿದ್ದರು ಎಂದು ತಸ್ಲೀಮಾ ಟ್ವೀಟ್ ಮಾಡಿದ್ದಾರೆ.

ಮೊಯಿನ್ ಅಲಿ ಅವರ ಬಗ್ಗೆ ಬರೆದ ತಸ್ಲೀಮಾ ಅವರ ಈ ಟ್ವೀಟ್ ವ್ಯಾಪಕ ಟೀಕೆಗೆ ಗುರಿಯಾಗಿದೆ.

If Moeen Ali were not stuck with cricket, he would have gone to Syria to join ISIS.
— taslima nasreen (@taslimanasreen)April 4, 2021

ವಿಶ್ವಕಪ್ ಹೀರೋ ಮತ್ತು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಲೇಖಕಿ ಟ್ವೀಟ್ ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

“ನೀವು ಆರಾಮವಾಗಿದ್ದೀರಾ? ನೀವು ಆರಾಮವಾಗಿದ್ದೀರೆಂದು ನಾನು ಭಾವಿಸುವುದಿಲ್ಲ” ಆರ್ಚರ್ ತಸ್ಲೀಮಾ ಟ್ವೀಟ್ ಗೆ ಪ್ರತಿಯಾಗಿ ಟ್ವೀಟ್ ಮಾಡಿದ್ದಾರೆ.

ಮೊಯಿನ್ ಅಲಿ ಪ್ರಸ್ತುತ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.

error: Content is protected !!