ಧಾರವಾಡ: 80ರ ದಶಕದಲ್ಲಿ ರೈತರ ಮೇಲೆ ಗೋಲಿಬಾರ್ ಆದಾಗ ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ರೈತ ಬಂಡಾಯವೇ ನಡೆಯಿತು. ನರಗುಂದ ಬಂಡಾಯದಿಂದ ಅಂದಿನ ಗುಂಡೂರಾವ್ ಸರ್ಕಾರ ಬಿದ್ದಿತ್ತು. ಅಂತಹ ಶಕ್ತಿ ರೈತರಿಗೆ ಹಾಗೂ ರೈತ ಹೋರಾಟಕ್ಕಿದೆ. ಕೇಂದ್ರ ಸರ್ಕಾರ ಕೂಡ ಕೃಷಿ ವಿರೋಧಿ ನೀತಿಗಳನ್ನು ವಾಪಸ್ ಪಡೆಯದೇ ಹೋದಲ್ಲಿ ಈ ಸರ್ಕಾರವನ್ನೂ ಕಿತ್ತೊಗೆಯುವ ಶಕ್ತಿ ರೈತರಿಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಅಲ್ಲಾಪುರ ಮಂಜೇಗೌಡ ಹೇಳಿದರು.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಕೊರೊನಾ ಬಂದ ಸಮಯದಲ್ಲಿ, ಯಾರೂ ಹೊರಗಡೆ ಬರಲಾರದಂತಹ ಪರಿಸ್ಥಿತಿ ಇದ್ದಾಗ ಕೇಂದ್ರ ಸರ್ಕಾರ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ದೆಹಲಿಯಲ್ಲಿ ರೈತ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಜ.25 ರಂದು ದೆಹಲಿ ಚಲೋಗೆ ಕರೆ ಕೊಟ್ಟಾಗ ಕರ್ನಾಟಕದ ಚಾಮರಾಜನಗರದಿಂದ ದೆಹಲಿವರೆಗೂ ಕ್ಯಾಂಟರ್ ವಾಹನಗಳನ್ನು ತೆಗೆದುಕೊಂಡು ಹೋಗಿ ಹೋರಾಟ ಮಾಡಿ ಬರಲಾಗಿದೆ. ಅಂದು ಇಡೀ ದೇಶದ ರೈತರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ರಾಜ್ಯದ ರೈತರು ಹೋರಾಟ ಮಾಡುತ್ತಿದ್ದಾರೆ. ಅಲ್ಲದೇ ರೈತರು ಕಷ್ಟದಲ್ಲಿದ್ದಾರೆ. ಯಾವುದೋ ಒಂದು ಸಿಡಿ ಪ್ರಕರಣದಲ್ಲಿ ಭಾಗಿಯಾದವರಿಗೆ ಬೆಂಬಲ ನೀಡುತ್ತಿರುವ ಈ ರಾಜ್ಯದ ಮುಖ್ಯಮಂತ್ರಿಗೆ ರೈತರೊಂದಿಗೆ ಮಾತನಾಡುವಷ್ಟು ಸಮಯ ಇಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರ ನಿವಾಸದ ಮೇಲೆ ಉಗ್ರರ ಗುಂಡಿನ ದಾಳಿ : ಪೊಲೀಸ್ ಕಾನ್ಸ್ಟೆಬಲ್ ಮೃತ್ಯು