ಚಾಮರಾಜನಗರ ದುರಂತ : ಮೈಸೂರ DC ಯೇ ನೇರ ಕಾರಣ ಚಾಮರಾಜನಗರ DC ಯಿಂದ ಆರೋಪ - BC Suddi
ಚಾಮರಾಜನಗರ ದುರಂತ : ಮೈಸೂರ DC ಯೇ ನೇರ ಕಾರಣ ಚಾಮರಾಜನಗರ DC ಯಿಂದ ಆರೋಪ

ಚಾಮರಾಜನಗರ ದುರಂತ : ಮೈಸೂರ DC ಯೇ ನೇರ ಕಾರಣ ಚಾಮರಾಜನಗರ DC ಯಿಂದ ಆರೋಪ

ಚಾಮರಾಜನಗರ: ಆಕ್ಸಿಜನ್ ಇಲ್ಲದೆ ಪರದಾಡಿ 24 ಜನ ಸಾವನಪ್ಪಿದ ಚಾಮರಾಜನಗರದ ದುರಂತಕ್ಕೆ ಸಂಬಂಧಿಸಿದಂತೆ ಪರಸ್ಪರ ಡಿಸಿಗಳಿಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಅತ್ತ 24 ಮನೆಯ ದೀಪಗಳು ನಂದಿ ಹೋಗಿವೆ ಇತ್ತ ಅಧಿಕಾರಿಗಳ ಕೆಸರೆರಚಾಟ ಜೋರಾಗಿದೆ.

ಹೌದು ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಮೈಸೂರು ಡಿಸಿ ಅವರೇ ನೇರ ಕಾರಣ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ಆರೋಪಿಸಿದ್ದಾರೆ. ಮೈಸೂರು ಡಿಸಿಯಿಂದಲೇ ನಮಗೆ ಪೂರೈಕೆಯಾಗುವ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆಕ್ಸಿಜನ್ ಪೂರೈಕೆ ಆಗಿದ್ದರೆ ಅಮೂಲ್ಯ ಜೀವ ಉಳಿಸಬಹುದಿತ್ತು. ರೋಹಿಣಿ ಸಿಂಧೂರಿಯವರೇ ನೀವು ಮೈಸೂರಿಗೆ ಡಿಸಿಯಾಗಿ ಚಾಮರಾಜನಗರ ಆಡಳಿತದಲ್ಲಿ ನೀವು ಮೂಗು ತೂರಿಸಬೇಡಿ.

ನೋಡಲ್ ಆಫೀಸರ್ ಆಗಿ ನಿಮ್ಮನ್ನು ನೇಮಕ ಮಾಡಿಲ್ಲ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಚಾಮರಾಜನಗರ ಡಿಸಿ ಎಂ.ಆರ್.ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಬಹಳ ದೊಡ್ಡ ಸಮಸ್ಯೆ ಸಂಕಷ್ಟ ಬಂದಿದ್ದು ಮೈಸೂರಿನಿಂದ ಪೂರೈಕೆ ಆಗಲಿಲ್ಲ. ನನಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತಾ ತಿಳಿದ ತಕ್ಷಣ ಸಚಿವರು, ನೋಡಲ್ ಅಧಿಕಾರಿ ಸಿಎಸ್ ಅವರಿಗೆ ಮಾಹಿತಿ ನೀಡಿದೆ.

ಮೈಸೂರು ಜಿಲ್ಲಾಧಿಕಾರಿ ಸುಳ್ಳು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಮ್ಮ ಸಿಲಿಂಡರ್ ಇರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. 10 ಗಂಟೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಹಿಂದಿನ ದಿನದಿಂದ ಆಕ್ಸಿಜನ್ ನೀಡಲು ಮೀನಾಮೇಷ ಎಣಿಸಿದ್ದಾರೆ.

ಕೇಳಿದರೆ ಸರಬರಾಜುದಾರರಿಗೆ ಮೈಸೂರು ಡಿಸಿಯಿಂದ ಅನುಮತಿ ಪಡೆಯಬೇಕು ಅಂತಾ ಹೇಳಿದ್ದಾರೆ. ಇದು ನನಗೆ ಅರ್ಥ ಆಗುತ್ತಿಲ್ಲ. ಅವರು ಒಂದು ದೊಡ್ಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಲ್ಲೇ ಅವರು ಕೆಲಸ ಮಾಡಲಿ. ಈ ಕಡೆ ಯಾಕೆ ತಲೆ ಹಾಕಬೇಕು ? ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

ಆಕ್ಸಿಜನ್ ಸಮಸ್ಯೆ ಬಗ್ಗೆ ನಾನು ಸಿಎಸ್ ಅವರಿಗೆ ಹೇಳಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕವೂ ಹೇಳಿದ್ದೆ. ಅವರೇ ಈ ರೀತಿ ಮಾಡದಂತೆ ನಿರ್ದೇಶನ ನೀಡುತ್ತೇನೆ ಅಂತಾ ಹೇಳಿದ್ದರು. ಖುದ್ದು ಸಿಎಂ ಸಹಾ ಮೈಸೂರು ಡಿಸಿಗೆ ನಿರ್ದೇಶನ ನೀಡಿದ್ದರು. ಸಿಎಂ ಹೇಳಿದ್ದರು ಏಕೆ ರೋಹಿಣಿ ಸಿಂಧೂರಿ ನಮ್ಮ ಜಿಲ್ಲೆ ಬಗ್ಗೆ ಈ ರೀತಿ ಮಾಡಿದರು ಗೊತ್ತಿಲ್ಲ. ಘಟನೆ ದಿನ ಜಿಲ್ಲೆಯಲ್ಲಿ ಕೋವಿಡ್ ನಿಂದ ಒಟ್ಟು 27 ಸಾವುಗಳಾಗಿವೆ. ಸಿದ್ದರಾಮಯ್ಯ ಅವರು ಹೇಳಿದ ಎಲ್ಲಾ ಆಕ್ಸಿಜನ್ ಸಾವು ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ತಿಳಿಸಿದ್ದಾರೆ.