ನಿನ್ನೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಕ್ಕೆ ಸರಕಾರ ಬ್ರೇಕ್ ..! - BC Suddi
ನಿನ್ನೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಕ್ಕೆ ಸರಕಾರ ಬ್ರೇಕ್ ..!

ನಿನ್ನೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಕ್ಕೆ ಸರಕಾರ ಬ್ರೇಕ್ ..!

 

ಬೆಂಗಳೂರು : ನಿನ್ನೆ  ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬೆಂಗಳೂರಿನಿಂದ ಬರುವ ಪ್ರಯಾಣಿಕರು ಕೊರೋನಾ ನೆಗೆಟಿವ್ ವರದಿ ತರುವಂತೆ ಆದೇಶ ಹೊರಡಿಸಿದ್ದರು ಇವರ ಆದೇಶಕ್ಕೆ ಬ್ರೇಕ್ ಬಿದಿದ್ದೆ

ಏನಪ್ಪ ಅಂದ್ರೆ ಈಗಾಗಲೇ ರಾಜ್ಯ ಸರ್ಕಾರ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಹೊರತಾಗಿ ಬೇರೆ ಯಾವುದೇ ಅಧಿಕಾರಿ, ಸಚಿವರು ಕೊರೋನಾ ನಿಯಂತ್ರಣ ಕ್ರಮ, ಆದೇಶ ಹೊರಡಿಸಬಾರದು ಎಂಬುದಾಗಿ ಸೂಚಿಸಿತ್ತು. ಆದ್ರೇ ಇದನ್ನು ಮೀರಿ. ಇಂತಹ ಆದೇಶಕ್ಕೆ ಅಬ್ಜೆಕ್ಷನ್ ಮಾಡಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್ ಪ್ರಸಾದ್ ಪ್ರತಿ ಆದೇಶ ಹೊರಡಿಸಿದ್ದಾರೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ಅವರು, ಕೊರೋನಾ ನಿಯಂತ್ರಣ ಕ್ರಮಗಳನ್ನು ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಮುಖ್ಯ ಕಾರ್ಯದರ್ಶಿಯವರ ಸಹಿಯಲ್ಲಿ ಮಾತ್ರ ಹೊರಡಿಸುವುದು. ಅಂತಹ ಎಲ್ಲಾ ಆದೇಶಗಳನ್ನು ಮುಖ್ಯಮಂತ್ರಿಯವರ ಅನುಮೋದನೆ ಪಡೆದೆ ಹೊರಡಿಸತಕ್ಕದ್ದು. ಇದರ ಹೊರತಾಗಿ ಯಾವುದೇ ಸಚಿವರಾಗಲಿ, ಅಧಿಕಾರಿಗಳಾಗಲಿ ಪತ್ರಿಕಾ ಹೇಳಿಕೆ ನೀಡಬಾರದೆಂದು ಸೂಚಿಸಲಾಗಿದೆ.

ಆದಾಗ್ಯೂ ಕೆಲವು ಜಿಲ್ಲೆಗಳ ಜಿಲ್ಲಾಡಳಿತವು ಕೋವಿಡ್-19 ಸೋಂಕು ನಿಯಂತ್ರಣ ಕುರಿತಂತೆ ಪ್ರತ್ಯೇಕ ಸಲಹೆ, ಸೂಚನೆಗಳ್ನು ಹೊರಡಿಸುತ್ತಿರುವುದು ಕಂಡು ಬಂದಿದ್ದು, ಇದು ಮಾನ್ಯ ಮುಖ್ಯಮಂತ್ರಿಯವರು ನೀಡಿರುವ ನಿರ್ದೇಶನಕ್ಕೆ ವ್ಯತಿರಿಕ್ತವಾಗಿರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಇಲಾಖಾ ಮುಖ್ಯಸ್ಥರು, ಜಿಲ್ಲಾಡಳಿತಗಳು, ಪ್ರಾಧಿಕಾರಿಗಳು, ಬಿಬಿಎಂಪಿ ಮತ್ತು ನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿತ ಯಾವುದೇ ಪ್ರತ್ಯೇಕ ಆದೇಶಗಳನ್ನು ತಮ್ಮ ಹಂತದಲ್ಲಿ ಹೊರಡಿಸತಕ್ಕದ್ದಲ್ಲ. ಒಂದು ವೇಳೆ ಹೊರಡಿಸಿದ್ರೇ.. ತಕ್ಷಣವೇ ಹಿಂಪಡೆಯುವುದು ಎಂಬುದಾಗಿ ತಿಳಿಸಿದ್ದಾರೆ.

error: Content is protected !!