'ಸಿಡಿ' ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ: ಮುಲಾಲಿ - BC Suddi
‘ಸಿಡಿ’ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ: ಮುಲಾಲಿ

‘ಸಿಡಿ’ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ: ಮುಲಾಲಿ

ಮಂಗಳೂರು: ಈಗಿನ ಸಿಡಿ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ. ಆದರೆ,ಸಂತ್ರಸ್ತೆ ರಕ್ಷಣೆ ಕೋರಿದರೆ ಸುಪ್ರೀಂ ಕೋರ್ಟ್ ತನಕವೂ ಹೋರಾಟ ನಡೆಸಲು ಸಿದ್ಧನಿದ್ದೇನೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ನಡೆದಿರುವ ಚರ್ಚೆಯಲ್ಲಿ ನನ್ನ ಹೆಸರನ್ನು ಹಲವರು ಪ್ರಸ್ತಾಪಿಸಿದ್ದು, ಇದನ್ನು ಕಡತದಿಂದ ತೆಗೆದು ಹಾಕಲು ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದರು.
ಈ ‘ಸಿಡಿ’ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜಶೇಖರ ಮುಲಾಲಿ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು,’ ಪರಿಷತ್ತನ್ನು ಭ್ರಷ್ಟಾಚಾರ ಮುಕ್ತ ಮಾಡಲಾಗುವುದು. ಜಾತಿ ರಾಜಕೀಯ, ನಿವೃತ್ತ ಅಧಿಕಾರಿಶಾಹಿಗಳ ರಾಜಕಾರಣ, ಸೀಮಿತ ಜನಗಳಿಗೆ ಸೀಮಿತಗೊಂಡಿರುವುದನ್ನು ಮುಕ್ತ ಮಾಡಲಾಗುವುದು’ ಎಂದರು.

error: Content is protected !!