ಚೆನ್ನೈ: ಮತ್ತೊಮ್ಮೆ ಮುಗ್ಗರಿಸಿದ ಮುಂಬೈ : 6 ವಿಕೆಟ್ ಗಳ ಗೆಲುವು ದಾಖಲಿಸಿದ ಡೆಲ್ಲಿ - BC Suddi
ಚೆನ್ನೈ: ಮತ್ತೊಮ್ಮೆ ಮುಗ್ಗರಿಸಿದ ಮುಂಬೈ : 6 ವಿಕೆಟ್ ಗಳ ಗೆಲುವು ದಾಖಲಿಸಿದ ಡೆಲ್ಲಿ

ಚೆನ್ನೈ: ಮತ್ತೊಮ್ಮೆ ಮುಗ್ಗರಿಸಿದ ಮುಂಬೈ : 6 ವಿಕೆಟ್ ಗಳ ಗೆಲುವು ದಾಖಲಿಸಿದ ಡೆಲ್ಲಿ

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮತ್ತೊಮ್ಮೆ ಮುಗ್ಗಿರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರು ವಿಕೆಟ್ ಗಳ ಅಂತರದ ಗೆಲುವು ದಾಖಲಿಸಿದೆ.

ಟಾಸ್ ಗೆದ್ದ ಮುಂಬೈ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 137 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮುಂಬೈ ಪರ ನಾಯಕ ರೋಹಿತ್ ಶರ್ಮಾ 44 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 24, ಇಶಾನ್ ಕಿಶಾನ್ 26, ಜಯಂತ್ ಯಾದವ್ 23 ರನ್ ಗಳಿಸಿದರು. ಡೆಲ್ಲಿ ಪರ ಮಿಶ್ರಾ 4 ವಿಕೆಟ್ ಪಡೆದರು.

ಇನ್ನು ಮುಂಬೈ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 19.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಗೆಲುವಿನ ನಗೆ ಚೆಲ್ಲಿತು. ಡೆಲ್ಲಿ ಪರ ಶಿಖರ್ ಧವನ್ 45, ಸ್ಟೀವನ್ ಸ್ಮಿತ್ 33, ಲಲಿತ್ ಯಾದವ್ 22 ರನ್ ಗಳಿಸಿದರು.

60 ಕೆ.ಜಿ. ತೂಕದ ಜಂಬೊ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ..?