ನೀವು ರಾಜೀನಾಮೆ ಕೇಳುವುದಲ್ಲ, ಸರಕಾರಕ್ಕೆ ಸಲಹೆ ಕೊಡಿ : ಸಂಸದೆ ಶೋಭಾ ಕರಂದ್ಲಾಜೆ - BC Suddi
ನೀವು ರಾಜೀನಾಮೆ ಕೇಳುವುದಲ್ಲ, ಸರಕಾರಕ್ಕೆ ಸಲಹೆ ಕೊಡಿ : ಸಂಸದೆ ಶೋಭಾ ಕರಂದ್ಲಾಜೆ

ನೀವು ರಾಜೀನಾಮೆ ಕೇಳುವುದಲ್ಲ, ಸರಕಾರಕ್ಕೆ ಸಲಹೆ ಕೊಡಿ : ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಸಿದ್ದರಾಮಯ್ಯ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರು.ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ವಿರೋಧ ಪಕ್ಷಕ್ಕೂ ಅಷ್ಟೇ ಇದೆ. ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವುದು ಪರಿಹಾರ ಅಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನೀವು ರಾಜೀನಾಮೆ ಕೇಳುವುದಲ್ಲ.ಸರಕಾರಕ್ಕೆ ಸಲಹೆ ಕೊಡಿ. ಅಧಿಕಾರಿಗಳ ಸಭೆ ಕರೆಯಿರಿ.ಸಿದ್ದರಾಮಯ್ಯನವರು ರಾಜ್ಯದಲ್ಲಿ ಐದು ವರ್ಷ ಆಳ್ವಿಕೆ ಮಾಡಿದ್ದಾರೆ.50 ವರ್ಷಗಳ ಕಾಂಗ್ರೆಸ್ ನ ಕೆಟ್ಟ ಆಡಳಿತವನ್ನು ಈಗ ಅನುಭವಿಸುತ್ತಿದ್ದೇವೆ.ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಆಸ್ಪತ್ರೆಗಳನ್ನು ಬೆಳೆಸಿಲ್ಲ. ನಾನೀಗ ರಾಜಕೀಯ ಮಾತನಾಡುವುದಿಲ್ಲ. ಎಲ್ಲರೂ ಒಟ್ಟು ಸೇರಿ ಕೊರೊನಾ ಎದುರಿಸೋಣ ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ದೆಹಲಿ : ಕೊರೊನಾ ಕರ್ತವ್ಯ ನಿರ್ವಹಿಸುವ ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ