ತಾಯಿಯಾದ ಸಂಭ್ರಮದಲ್ಲಿ ರುವ ನಟಿ ಮಯೂರಿ ..! - BC Suddi
ತಾಯಿಯಾದ ಸಂಭ್ರಮದಲ್ಲಿ ರುವ  ನಟಿ ಮಯೂರಿ ..!

ತಾಯಿಯಾದ ಸಂಭ್ರಮದಲ್ಲಿ ರುವ ನಟಿ ಮಯೂರಿ ..!

ಚಂದನವನದ ನಟಿ ಮಯೂರಿ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಮಯೂರಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಮಯೂರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಸದ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮಗುವಿನ ಮುದ್ದಾದ ಕೈ ಫೋಟೋವನ್ನು ಹಂಚಿಕೊಂಡಿರುವ ಮಯೂರಿ, ‘ಈ ಸುಂದರ ಅನುಭವವನ್ನು ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ.

ಮತ್ತೊಂದು ಸುಂದರವಾದ ಪಯಣ ಪ್ರಾರಂಭವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ, ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ನಟಿ ಮಯೂರಿ ಗರ್ಭಿಣಿ ಫೋಟೋಶೂಟ್ ಮತ್ತು ಸೀಮಂತ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಯೂರಿ ಸುಂದರ ಫೋಟೋಗಳಿಗೆ ಅಭಿಮಾನಿಗಳು ಮತ್ತು ಆಪ್ತರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ 2020 ಜೂನ್ ನಲ್ಲಿ ಹಸೆಮಣೆ ಏರಿದ್ದರು. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಮಯೂರಿ ಸರಳವಾಗಿ ಮದುವೆಯಾಗಿದ್ದರು. ಇದೀಗ ಮದುವೆಯಾಗಿ ವರ್ಷ ತುಂಬುವಷ್ಟರಲ್ಲೇ ಪುಟ್ಟ ಕಂದಮ್ಮನನ್ನು ಸ್ವಾಗತಿಸಿದ್ದಾರೆ.

 

 

error: Content is protected !!