ನವದೆಹಲಿ: 15 ಶೇಕಡಕ್ಕೂ ಹೆಚ್ಚು ಸೋಂಕಿತರು ಹೊಂದಿರುವ 150 ಜಿಲ್ಲೆಗಳ ಲಾಕ್‌ಡೌನ್‌ಗೆ ಶಿಫಾರಸ್ಸು - BC Suddi
ನವದೆಹಲಿ: 15 ಶೇಕಡಕ್ಕೂ ಹೆಚ್ಚು ಸೋಂಕಿತರು ಹೊಂದಿರುವ 150 ಜಿಲ್ಲೆಗಳ ಲಾಕ್‌ಡೌನ್‌ಗೆ ಶಿಫಾರಸ್ಸು

ನವದೆಹಲಿ: 15 ಶೇಕಡಕ್ಕೂ ಹೆಚ್ಚು ಸೋಂಕಿತರು ಹೊಂದಿರುವ 150 ಜಿಲ್ಲೆಗಳ ಲಾಕ್‌ಡೌನ್‌ಗೆ ಶಿಫಾರಸ್ಸು

ನವದೆಹಲಿ: ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು ಪ್ರತಿದಿನ ಲಕ್ಷಾಂತರ ಜನರು ಕರೋನಾದಿಂದ ಬಳಲುತ್ತಿದ್ದಾರೆ. ಕೊರೊನಾ ನಿಯಂತ್ರಿಸಲು ಸೋಂಕಿನ ಪ್ರಮಾಣವು ಶೇಕಡಾ 15 ರಷ್ಟಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲು ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಮಂಡಿಸಿದ ಪ್ರಸ್ತಾವನೆಯಲ್ಲಿ ಕರೋನಾದಿಂದ ಹೆಚ್ಚುತ್ತಿರುವ ಜೀವಹಾನಿಯ ದೃಷ್ಟಿಯಿಂದ, ಅನೇಕ ಜಿಲ್ಲೆಗಳಲ್ಲಿ ಮತ್ತೊಮ್ಮೆ ಲಾಕ್‌ಡೌನ್ ವಿಧಿಸಲು ನಿರ್ಧಾರ ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ, ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ.ಸೋಂಕಿತರು ಶೇಕಡಾ 15 ಕ್ಕಿಂತ ಮೇಲಿರುವ ದೇಶದ 150 ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಧಿಸಬಹುದು. ಆದರೆ, ಈ ಕುರಿತು ಅಂತಿಮ ತೀರ್ಮಾನವನ್ನು ರಾಜ್ಯ ಸರ್ಕಾರಗಳೊಂದಿಗೆ ಜೊತೆ ಸಮಾಲೋಚನೆ ನಡೆಸಿದ ಬಳಿಕ ತೆಗೆದುಕೊಳ್ಳಲಾಗುತ್ತದೆ.

ಈ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೂಂಡು, ಆರೋಗ್ಯ ಸೇವೆಗಳು ಒತ್ತಡದಲ್ಲಿರುವ ಹಿನ್ನೆಲೆಯಲ್ಲಿ ಈ ಉನ್ನತ ಮಟ್ಟದ ಸಭೆಯಲ್ಲಿ ಈ ಶಿಫಾರಸ್ಸು ಮಾಡಲಾಗಿದೆ. ಲಾಕ್ ಡೌನ್ ಮಾಡದಿದ್ದರೆ ಆರೋಗ್ಯ ವ್ಯವಸ್ಥೆ ಮೇಲೆ ತೀವ್ರ ಹೊರೆ ಸೃಷ್ಟಿಯಾಗುವ ಸಾಧ್ಯತೆ ಇದೆ ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.

ಏ.28 ರಂದು ಭಾರತದಲ್ಲಿ 3,60,960 ಹೊಸ ಕೋವಿಡ್-19 ಸೋಂಕು ವರದಿಯಾಗಿದ್ದು, 24 ಗಂಟೆಗಳಲ್ಲಿ 2,61,162 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಿದ 85ರ ಹಿರಿಯ ಜೀವ..!