ಬೆಂಗಳೂರು: ರಾಜ್ಯದಲ್ಲಿ ಸೋಮವಾರದಂದು 29,744 ಹೊಸ ಕೊರೋನಾ ಪ್ರಕರಣಗಳು ಪತ್ತೆ - BC Suddi
ಬೆಂಗಳೂರು: ರಾಜ್ಯದಲ್ಲಿ ಸೋಮವಾರದಂದು 29,744 ಹೊಸ ಕೊರೋನಾ ಪ್ರಕರಣಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಂದು 29,744 ಹೊಸ ಕೊರೋನಾ ಪ್ರಕರಣಗಳು ಪತ್ತೆ

ಬೆಂಗಳೂರು: ಏಪ್ರಿಲ್ 26ರ ಸೋಮವಾರ ಕರ್ನಾಟಕದಲ್ಲಿ 29,744 ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 2,81,042 ಕ್ಕೆ ಏರಿಕೆಯಾಗಿವೆ.

ಬೆಂಗಳೂರು ನಗರದಲ್ಲಿ ಮಾತ್ರ ಸೋಮವಾರ 16,545 ಪ್ರಕರಣಗಳು ದಾಖಲಾಗಿವೆ. ಕರೋನಾ ವೈರಸ್‌ನಿಂದಾಗಿ 201 ಸಾವುಗಳು ಸೋಮವಾರ ವರದಿಯಾಗಿವೆ. ಬೆಂಗಳೂರು ನಗರದಲ್ಲಿ 105 ಸಾವುಗಳು ಮತ್ತು ಬಳ್ಳಾರಿಯಲ್ಲಿ 18 ಸಾವುಗಳು ದಾಖಲಾಗಿದೆ. ಇದರೊಂದಿಗೆ ಇದುವರೆಗಿನ ಮೃತರ ಸಂಖ್ಯೆ 14,627 ಕ್ಕೆ ಏರಿಕೆಯಾಗಿದೆ.

ಸೋಮವಾರ 10,663 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಇದುವರೆಗಿನ ಒಟ್ಟು ಗುಣಮುಖರಾದವರ ಸಂಖ್ಯೆ 10,73,257 ಕ್ಕೆ ತಲುಪಿದೆ.