ಮೋದಿ ಸರ್ಕಾರದ್ದು ಬರೀ ಸುಳ್ಳು ಭರವಸೆ: 15 ಲಕ್ಷ ಬಂದಿದೆಯಾ ಎಂದು ದೀದಿ ಪ್ರಶ್ನೆ - BC Suddi
ಮೋದಿ ಸರ್ಕಾರದ್ದು ಬರೀ ಸುಳ್ಳು ಭರವಸೆ: 15 ಲಕ್ಷ ಬಂದಿದೆಯಾ ಎಂದು ದೀದಿ ಪ್ರಶ್ನೆ

ಮೋದಿ ಸರ್ಕಾರದ್ದು ಬರೀ ಸುಳ್ಳು ಭರವಸೆ: 15 ಲಕ್ಷ ಬಂದಿದೆಯಾ ಎಂದು ದೀದಿ ಪ್ರಶ್ನೆ

ಪಶ್ಚಿಮ ಬಂಗಾಳ: ಚುನಾವಣೆಗಾಗಿ ಜನರಿಗೆ ಸುಳ್ಳು ಭರವಸೆ ನೀಡುವುದನ್ನು ನಿಲ್ಲಿಸಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣ ಕಣ ರಂಗೇರುತ್ತಿದ್ದು, ನಿನ್ನೆ ಸಿಎಂ ಮಮತಾ ಬ್ಯಾನರ್ಜಿ ಬಂಕುರಾ ಜಿಲ್ಲೆಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ನಿಮ್ಮ ಮನೆಯಲ್ಲಿ ಬಡತನ ಕಾಡುತ್ತಿದೆಯೇ? ಹಾಗಾದ್ರೆ ದಿನವೂ ಮುಂಜಾನೆ ಇವುಗಳನ್ನು ನೋಡಿ ಸಾಕು ..!

ನಾವು ಅಧಿಕಾರಕ್ಕೆ ಬಂದರೆ ಕಪ್ಪುಹಣವನ್ನ ವಾಪಸ್​ ತಂದು ದೇಶದಲ್ಲಿರುವ ಎಲ್ಲ ಜನರ ಖಾತೆಗೆ ತಲಾ 15 ಲಕ್ಷ ರೂ. ಹಾಕುತ್ತೇವೆಂದು ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಭರವಸೆ ನೀಡಿತ್ತು. ಈ ವಿಚಾರವನ್ನು ದೀದಿ ಮತ್ತೆ ಎತ್ತಿದರು. “ಕಳೆದ ಬಾರಿ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಒಂದು ಪ್ರಶ್ನೆ ಕೇಳುತ್ತೇನೆ.

ನಿಮ್ಮ ಬ್ಯಾಂಕ್​ ಖಾತೆಗೆ 15 ಲಕ್ಷ ರೂ. ಹಣ ಜಮೆ ಆಗಿದ್ಯಾ? ಚುನಾವಣೆ ವೇಳೆ ಬಿಜೆಪಿಯವರು ಬಂದ್ರು, ಅಕ್ಕಿ-ಬೇಳೆ ಕೊಡ್ತೀವಿ ಅಂದ್ರು. ನಿಮ್ಮ ವೋಟ್​ ಕಿತ್ತುಕೊಂಡು ಹೋದ್ರು ಅಷ್ಟೇ. ಸುಳ್ಳು ಭರವಸೆಗಳಿಗೆ ಬಲಿಯಾಗಬೇಡಿ” ಎಂದು ಹರಿಹಾಯ್ದರು.

error: Content is protected !!