ಕಾಶ್ಮೀರದಲ್ಲಿ ಮೋದಿ ಸರ್ಕಾರದಿಂದ ಅಭಿವೃದ್ದಿ ಯೋಜನೆ : ಸೌದಿಯ ದಿನಪತ್ರಿಕೆ ಶ್ಲಾಘನೆ - BC Suddi
ಕಾಶ್ಮೀರದಲ್ಲಿ ಮೋದಿ ಸರ್ಕಾರದಿಂದ ಅಭಿವೃದ್ದಿ ಯೋಜನೆ : ಸೌದಿಯ ದಿನಪತ್ರಿಕೆ ಶ್ಲಾಘನೆ

ಕಾಶ್ಮೀರದಲ್ಲಿ ಮೋದಿ ಸರ್ಕಾರದಿಂದ ಅಭಿವೃದ್ದಿ ಯೋಜನೆ : ಸೌದಿಯ ದಿನಪತ್ರಿಕೆ ಶ್ಲಾಘನೆ

ಸೌದಿ ಅರೇಬಿಯಾ : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ಧತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರ ಕೈಗೊಂಡ ಅಭಿವೃದ್ದಿ ಯೋಜನೆಗಳ ಬಗ್ಗೆ ಸೌದಿ ಅರೇಬಿಯಾದ ಸೌದಿ ಗೆಜೆಟ್‌ ದಿನಪತ್ರಿಕೆ ಶ್ಲಾಘಿಸಿದೆ. ಸೌದಿ ಅರೇಬಿಯಾದ ದಿನ ಪತ್ರಿಕೆ ಸೌದಿ ಗೆಜೆಟ್‌, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಮೋದಿ ಸರ್ಕಾರವು ಸಾಕಷ್ಟು ಜಮ್ಮು ಮತ್ತು ಕಾಶ್ಮೀರಕ್ಕಾಗಿ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ರೂಪಿಸಿದೆ.

ಕೇಂದ್ರ ಸರ್ಕಾರ ಅಲ್ಲಿನ ವಿದ್ಯಾರ್ಥಿಗಳಿಗೆ ರೂಪಿಸಿದ ವಿದ್ಯಾರ್ಥಿವೇತನ ಯೋಜನೆಗಳು ಅಲ್ಲಿನ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿದೆ ಎಂದು ವರದಿ ಮಾಡಿದೆ. ಜಮ್ಮು ಕಾಶ್ಮೀರದ ಹಲವು ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ್ದು ದೇಶದಾದ್ಯಂತ ಮತ್ತು ವಿದೇಶಗಳಲ್ಲಿನ ದೊಡ್ಡದೊಡ್ಡ ಕಾರ್ಪೊರೇಟ್‌ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಲ್ಲು ತೂರಾಟ ಮಾಡುತ್ತಿದ್ದ ಯುವಕರಿಗೆ ಈಗ ಜೀವನೋಪಾಯಕ್ಕೆ ಪರ್ಯಾಯ ದಾರಿ ಸಿಕ್ಕಿದೆ. ಮೋದಿ ಸರ್ಕಾರದ ಕಾರ್ಯಕ್ರಮಗಳನ್ನು ಕಾಶ್ಮೀರದ ಯುವಕರು ಮೆಚ್ಚಿದ್ದಾರೆ. ಈಗ ಅಲ್ಲಿನ ಯುವಕರು ಯೋಗ್ಯ ಜೀವನ ನಿರ್ವಹಿಸುತ್ತಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಿದೆ.

ಇನ್ನು 2019ರ ಆಗಸ್ಟ್‌ 5ರ ನಂತರ ಶಸ್ತ್ರಾಸ್ತ್ರ ತ್ಯಜಿಸಿರುವ ಸ್ಥಳಿಯ ಉಗ್ರರಿಗೂ ಪುನರ್ವಸತಿ ಕಲ್ಪಿಸಲಾಗಿದೆ. ಅವರನ್ನು ಮುಖ್ಯವಾಹಿನಿಗೆ ಕರೆತರಲಾಗಿದೆ. ಹಾಗೆಯೇ ಅಲ್ಲಿ ತ್ರಿವರ್ಣ ಧ್ವಜ ಹಾರಿಸಲು ಯಾರನ್ನೂ ಬಿಡುವುದಿಲ್ಲ ಎಂದು ಈ ಹಿಂದೆ ಹೇಳುತ್ತಿದ್ದ ಅಲ್ಲಿನ ಸ್ಥಳೀಯ ನಾಯಕರ ಅಭಿಪ್ರಾಯ ತಪ್ಪು ಎಂಬುದು ಸಾಬೀತಾಗಿದೆ ಎಂದು ಕೂಡಾ ಸೌದಿ ಗೆಜೆಟ್‌ ದಿನಪತ್ರಿಕೆ ವರದಿ ಮಾಡಿದೆ.

 

error: Content is protected !!