ಶೈಕ್ಷಣಿಕ ವಿಚಾರದಲ್ಲಿ ಸಚಿವರುಗಳ ಗೊಂದಲ ಹೇಳಿಕೆ: ಪೋಷಕರಲ್ಲಿ ಆತಂಕ.! - BC Suddi
ಶೈಕ್ಷಣಿಕ ವಿಚಾರದಲ್ಲಿ ಸಚಿವರುಗಳ ಗೊಂದಲ ಹೇಳಿಕೆ: ಪೋಷಕರಲ್ಲಿ ಆತಂಕ.!

ಶೈಕ್ಷಣಿಕ ವಿಚಾರದಲ್ಲಿ ಸಚಿವರುಗಳ ಗೊಂದಲ ಹೇಳಿಕೆ: ಪೋಷಕರಲ್ಲಿ ಆತಂಕ.!

 

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ| ಕೆ.ಸುಧಾಕರ್‌ ಅವರು, ರವಿವಾರ ಬೆಳಗ್ಗೆ ಒಂದರಿಂದ ಒಂಬತ್ತನೇ ತರಗತಿವರೆಗೆ ಪರೀಕ್ಷೆ ಇಲ್ಲದೇ ಪಾಸ್‌ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದರು.

ಆದರೆ ಸಂಜೆ ವೇಳೆಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಇಂಥ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿ ಮತ್ತೆ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗೊಂದಲಕ್ಕೀಡು ಮಾಡಿತು.

ಕಳೆದೊಂದು ತಿಂಗಳಿನಿಂದೀಚೆಗೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ಸಾವಿನ ಪ್ರಮಾಣ ಕಡಿಮೆಯಾಗಿದ್ದರೂ ಸೋಂಕಿನ ಪ್ರಸರಣದ ತೀವ್ರತೆ ಹೆಚ್ಚಾಗಿದೆ. ಮುಂದಿನ ಒಂದೂವರೆ ತಿಂಗಳ ಕಾಲ ಸೋಂಕಿನ ತೀವ್ರತೆ ಇದೇ ಗತಿಯಲ್ಲಿ ಮುಂದುವರಿಯುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಅಷ್ಟು ಮಾತ್ರವಲ್ಲದೆ ಇದು ರೂಪಾಂತರಿತ ಸೋಂಕು ಎಂಬುದು ಖಚಿತವಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಶೈಕ್ಷಣಿಕ ವಿಚಾರದಲ್ಲಿ ಕೊರೊನಾ ಸಂದರ್ಭವೂ ಸೇರಿದಂತೆ ಕಳೆದ ವರ್ಷ ಅನುಸರಿಸಲಾಗಿದ್ದ ಗೊಂದಲಗಳೇ ಈ ವರ್ಷವೂ ಮುಂದುವರಿಯಲಿವಯಾ ಎಂಬ ಪ್ರಶ್ನೆ ಪೋಷಕರಲ್ಲಿ ಏಳದೇ ಇರಲಾರದು.!

error: Content is protected !!