ಸಚಿವರ, ಶಾಸಕರ, ಟಿಎಡಿಎ ಎಲ್ಲಾ ವೇತನ ಕಟ್ ಮಾಡಿ: ಸಚಿವ ಎಂಟಿಬಿ ನಾಗರಾಜ್ - BC Suddi
ಸಚಿವರ, ಶಾಸಕರ, ಟಿಎಡಿಎ ಎಲ್ಲಾ ವೇತನ ಕಟ್ ಮಾಡಿ: ಸಚಿವ ಎಂಟಿಬಿ ನಾಗರಾಜ್

ಸಚಿವರ, ಶಾಸಕರ, ಟಿಎಡಿಎ ಎಲ್ಲಾ ವೇತನ ಕಟ್ ಮಾಡಿ: ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು: ನಿನ್ನೆ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜ್​ ಆರೋಗ್ಯ ಸಚಿವ ಸುಧಾಕರ್ ಕಾರ್ಯ ವೈಫಲ್ಯತೆ ವಿರುದ್ಧ ಅಸಮಾಧಾನಿತರಾಗಿದ್ದಾರೆ ಎನ್ನಲಾಗಿದೆ. ಬೆಡ್ ಕೊಡಿಸಿ, ಆಕ್ಸಿಜನ್ ಕೊಡಿಸಿ ಎಂದು ನನ್ನ ಕ್ಷೇತ್ರದ ಜನರಿಂದ ದಿನವೂ ಹಲವು ಕರೆಗಳು ಬರುತ್ತಿವೆ.

ನಮ್ಮ ಸಂಬಂಧಿಕರು ಸಹಿತ ಹಾಸಿಗೆ ಸಿಗದೇ ಪರದಾಡಿದ್ರು. ನಾನೇ ಖುದ್ದು ಆರೋಗ್ಯ ಸಚಿವರಿಗೆ ಮೂರು ಸಲ ಕರೆ ಮಾಡಿದ್ದೇನೆ. ಒಂದೇ ಒಂದು ಬೆಡ್ ಅಡ್ಜಸ್ಟ್ ಮಾಡೋಕೆ ಆಗಲಿಲ್ಲ. ಸಚಿವನಾದ ನನಗೇ ಹೀಗಾದ್ರೆ ಜನಸಾಮಾನ್ಯರ ಪಾಡೇನು..? ಎಂದು ಎಲ್ಲರೆದುರು ಪ್ರಶ್ನೆ ಮಾಡಿದ್ದಾರೆ. ಇನ್ನು ಸಚಿವರ, ಶಾಸಕರ, ಟಿಎಡಿಎ ಎಲ್ಲಾ ವೇತನ ಕಟ್ ಮಾಡಿ. ಗೃಹ, ಕಂದಾಯ, ಆರೋಗ್ಯ ಇಲಾಖೆ ಹೊರತುಪಡಿಸಿ, ಉಳಿದ ಎಲ್ಲಾ ಇಲಾಖೆಗಳ ಸಿಬ್ಬಂದಿಯ ಒಂದು ತಿಂಗಳ ವೇತನ ಹಿಡಿದುಕೊಳ್ಳಿ.

ಇದರಿಂದ 5 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತೆ. ರಾಜ್ಯದ ಪ್ರತಿ ಕುಟುಂಬಕ್ಕೆ ₹15 ಸಾವಿರ ಹಣವನ್ನ ಹಾಕಿ. ಆಗ ಬೇಕಾದ್ರೆ ನೀವು 20 ದಿನ ಲಾಕ್​ಡೌನ್ ಮಾಡಿ, ಜನರಿಗೆ ಏನೂ ಇಲ್ಲದೇ ನೀವು ಹೀಗೆ ಮಾಡಿದ್ರೆ ಹೇಗೆ..? ಎಂದು ಸರ್ಕಾರದ ವಿರುದ್ಧವೇ ಎಂಟಿಬಿ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.