ಬೆಂಗಳೂರು: ವಿಧಾನ ಪರಿಷತ್ತಿನ ನೂತನ ಸಭಾಪತಿ ಬಸವರಾಜ ಹೊರಟ್ಟಿ ಹೊಸ ಕಾನುನನ್ನು ತಂದಿದ್ದಾರೆ. ಅದೇನೆಂದರೆ, ಇನ್ಮುಂದೆ ಸದನದಲ್ಲಿ ಸದಸ್ಯರು ಮೊಬೈಲ್ ಬಳಕೆ ಮಾಡದಂತೆ ಆದೇಶ ಹೊರಡಿಸಿದ್ದಾರೆ. ಮೊಬೈಲ್ ಬಳಕೆ ಮಾಡಿದರೆ ಕಠಿಣ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇಂದಿನಿಂದ  ಬಜೆಟ್ ಅಧೀವೇಶನ ಶುರುವಾಗಲಿದೆ, ಈ ನಿಟ್ಟಿನಲ್ಲಿ ಎಲ್ಲಾ ಸದ್ಯಸರು ಮೊಬೈಲ್ ತರದಂತೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಸಭಾನಾಯಕರು, ಸಚೇತಕರು ಹಾಗೂ ಸದ್ಯಸರ ಜೊತೆಗೆ ಚರ್ಚೆ ನಡೆಸಿ ಸದನದ ಘನತೆಗೆ ಕಪ್ಪು ಚುಕ್ಕೆ ಬಾರದ ಹಾಗೇ ನಡೆದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.