ಉಡುಪಿ: ಮಾಸ್ಕ್ ಇಲ್ಲದೆ ಮೆಹೆಂದಿ ಸಂಭ್ರಮದಲ್ಲಿ ಜಿಲ್ಲಾಧಿಕಾರಿ ಭಾಗಿ; ಜನರ ಆಕ್ರೋಶ - BC Suddi
ಉಡುಪಿ: ಮಾಸ್ಕ್ ಇಲ್ಲದೆ ಮೆಹೆಂದಿ ಸಂಭ್ರಮದಲ್ಲಿ ಜಿಲ್ಲಾಧಿಕಾರಿ  ಭಾಗಿ; ಜನರ ಆಕ್ರೋಶ

ಉಡುಪಿ: ಮಾಸ್ಕ್ ಇಲ್ಲದೆ ಮೆಹೆಂದಿ ಸಂಭ್ರಮದಲ್ಲಿ ಜಿಲ್ಲಾಧಿಕಾರಿ ಭಾಗಿ; ಜನರ ಆಕ್ರೋಶ

ಉಡುಪಿ: ನಿನ್ನೆ ಉಡುಪಿಯ ಕೋರ್ಟ್ ಆವರಣದಲ್ಲಿ ಕೋವಿಡ್ ನಿರ್ಬಂಧದ ನಡುವೆಯೇ ನೂರಾರು ಜನರಿಗೆ ಔತಣಕೂಟ ಏರ್ಪಡಿಸಿದ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಉಡುಪಿಯ ಎಡಿಷನಲ್ ಎಸ್ಪಿ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭಾಗಿಯಾಗಿದ್ದು, ಈ ವೇಳೆ ಮಾಸ್ಕ್ ಧರಿಸದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಜ್ಞಾಪಿಸುವ ಡಿ.ಸಿ. ಸಾಹೇಬ್ರು ಈ ರೀತಿ ಮಾಡಿರುವುದು ಸರಿಯಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.

ಮೊನ್ನೆಯಷ್ಟೇ ಬಸ್ಸಿನಿಂದ ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಆಕ್ರೋಶಕ್ಕೆ ಗುರಿಯಾಗಿದ್ದ ಡಿ.ಸಿ. ಈಗ ಈ ರೀತಿ ಮಾಸ್ಕ್ ಧರಿಸದೇ ಇರುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಎಎಸ್ಪಿ ಮಗಳ ಮೆಹಂದಿ ಕಾರ್ಯಕ್ರಮದ ಪೋಟೊ ಮತ್ತು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿ.ಸಿ. ಹಾಗೂ ಎಎಸ್ಪಿ ಇಬ್ಬರೂ ಮಾಸ್ಕ್ ಹಾಕದೇ ಭಾಗವಹಿಸಿದ್ದಲ್ಲದೆ, ಮೆಹಂದಿ‌ ಕಾರ್ಯಕ್ರಮದಲ್ಲಿ ಹುಡುಗಿಯರ ನೃತ್ಯವನ್ನೂ ಆಯೋಜಿಸಲಾಗಿತ್ತು.
ಜನಸಾಮಾನ್ಯರಿಗೆ ಒಂದು ಕಾನೂನು, ಅಧಿಕಾರಿಗಳಿಗೆ ಇನ್ನೊಂದು ಕಾನೂನು ಜಾರಿಯಲ್ಲಿದೆಯೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಆರೋಗ್ಯ ಸಚಿವ ಹರ್ಷವರ್ಧನ್‌ ರಾಜೀನಾಮೆ ನೀಡಬೇಕು: ಕಾಂಗ್ರೆ‌ಸ್ ನಾಯಕ ಪಿ.ಚಿದಂಬರಂ ಆಗ್ರಹ