6 ಮಂತ್ರಿಗಳ ಮೇಲೆ ಶಾಸಕರ ಅಸಮಾಧಾನ: ರಾತ್ರೋರಾತ್ರಿ ಸಿಎಂ ಭೇಟಿ? - BC Suddi
6 ಮಂತ್ರಿಗಳ ಮೇಲೆ ಶಾಸಕರ ಅಸಮಾಧಾನ: ರಾತ್ರೋರಾತ್ರಿ ಸಿಎಂ ಭೇಟಿ?

6 ಮಂತ್ರಿಗಳ ಮೇಲೆ ಶಾಸಕರ ಅಸಮಾಧಾನ: ರಾತ್ರೋರಾತ್ರಿ ಸಿಎಂ ಭೇಟಿ?

ಬೆಂಗಳೂರು: ರಾಜ್ಯದ 6ಜನ ಸಚಿವರ ಮೇಲೆ ಬಿಜೆಪಿ ಶಾಸಕರ ತಂಡವೊಂದು ಸಿಡಿದೆದ್ದಿದೆ. ಅನುದಾನ ವಿಚಾರವಾಗಿ ಒಟ್ಟು 30ಜನ ಶಾಸಕರು ನಿನ್ನೆ ಸೋಮವಾರ ರಾತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಹೊನ್ನಾಳಿಯ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರೇ ಈ ತಂಡದ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಅವರ ಗಮನಕ್ಕೆ ತಾರದೇ ಸಿಎಂ ಯಡಿಯೂರಪ್ಪ ಅವರು ಅನುದಾನ ಬಿಡುಗಡೆ ಮಾಡ್ತಿದ್ದಾರೆ. ಇದೇ ವಿಚಾರವಾಗಿ ಮುನಿಸಿಕೊಂಡಿರುವ ಈಶ್ವರಪ್ಪ, ಸಿಎಂ ಸಹಿ ಇರುವ ಅನುದಾನವನ್ನ ಬಾಗಿಲಿನಲ್ಲೇ ತಡೆ ಹಿಡಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಇದೇ ಕಾರಣಕ್ಕಾಗಿ ಶಾಸಕರು ಮಂತ್ರಿಗಳ ವಿರುದ್ಧ ಸಿಡಿದಿದ್ದು ಸಿಎಂ ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

error: Content is protected !!