ನಳಿನ್ ಕುಮಾರ್ ಕಟೀಲ್ ಮನೆಯ ಧರ್ಮನೇಮೋತ್ಸವಕ್ಕೆ ವಿವಿಧ ಗಣ್ಯರು ಭೇಟಿ - BC Suddi
ನಳಿನ್ ಕುಮಾರ್ ಕಟೀಲ್ ಮನೆಯ ಧರ್ಮನೇಮೋತ್ಸವಕ್ಕೆ ವಿವಿಧ ಗಣ್ಯರು ಭೇಟಿ

ನಳಿನ್ ಕುಮಾರ್ ಕಟೀಲ್ ಮನೆಯ ಧರ್ಮನೇಮೋತ್ಸವಕ್ಕೆ ವಿವಿಧ ಗಣ್ಯರು ಭೇಟಿ

ದ.ಕ. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ತರವಾಡು ಮನೆ ಬೆಳ್ಳಾರೆ ಸಮೀಪದ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿಯಲ್ಲಿ ಎ. 8ರಂದು ನಡೆಯುತ್ತಿರುವ ಧರ್ಮನೇಮೋತ್ಸವಕ್ಕೆ ಸಚಿವರುಗಳು, ಶಾಸಕರುಗಳ ಈಗಾಗಲೇ ಭೇಟಿ ನೀಡಿದ್ದಾರೆ.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಅಭಿವೃದ್ದಿ ಸಚಿವ ಈಶ್ವರಪ್ಪ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಮೂಡಬಿದ್ರೆ ಶಾಸಕ ಉಮನಾಥ್ ಕೊಟ್ಯಾನ್ ಸೇರಿದಂತೆ ರಾಜಕೀಯ ಮುಖಂಡರುಗಳು ಹಾಗೂ ಹಲವು ಗಣ್ಯರು ಭೇಟಿ ನೀಡಿದ್ದಾರೆ.

error: Content is protected !!