ಆರೋಗ್ಯ ತುರ್ತುಪರಿಸ್ಥಿತಿ : ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು ಕೊವಿಡ್ ಚಿಕಿತ್ಸಾ ಕೆಲಸಕ್ಕೆ ನಿಯೋಜನೆ, ಪ್ರಧಾನಿ ಮೋದಿ - BC Suddi
ಆರೋಗ್ಯ ತುರ್ತುಪರಿಸ್ಥಿತಿ : ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು ಕೊವಿಡ್ ಚಿಕಿತ್ಸಾ ಕೆಲಸಕ್ಕೆ ನಿಯೋಜನೆ, ಪ್ರಧಾನಿ ಮೋದಿ

ಆರೋಗ್ಯ ತುರ್ತುಪರಿಸ್ಥಿತಿ : ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳು ಕೊವಿಡ್ ಚಿಕಿತ್ಸಾ ಕೆಲಸಕ್ಕೆ ನಿಯೋಜನೆ, ಪ್ರಧಾನಿ ಮೋದಿ

ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಅಲ್ಲೋಲ ಕಲ್ಲೋಲಗಳು ಒಂದೇರಡಲ್ಲ. ಸೋಂಕಿನಿಂದ ಸಾಯುವವರ ಸರದಿ ಹೆಚ್ಚಿದೆ. ಸೋಂಕಿನಿಂದ ಸುಧಾರಿಸಿಕೊಳ್ಳಲು ಆಸ್ಪತ್ರೆ ಸೇರುತ್ತಿರುವ ಜನ ಆಕ್ಸಿಜನ್ ಸಿಗದೆ ಸಾಯುತ್ತಿದ್ದಾರೆ. ಬೆಡ್ ಗಳಿಲ್ಲ, ಸೂಕ್ತ ಚಿಕಿತ್ಸೆಗೆ ಬೇಕಾದ ಸೌಕರ್ಯಗಳಿಲ್ಲ ಹಾಗಾಗಿ ಕೊರೊನಾ ಸಾವಿನ ರಣಕಹಳೆ ಮೊಳಗುತ್ತಿದೆ.

ದೇಶದಲ್ಲಿಯ ಪರಿಸ್ಥಿತಿ ಕಂಡ ಪ್ರಧಾನಿ ಕೊವಿಡ್ ಪರಿಶೀಲನಾ ಸಮಿತಿಯು ಕೊವಿಡ್ ನಿರ್ವಹಣಾ ಕರ್ತವ್ಯಗಳಲ್ಲಿ ವೈದ್ಯಕೀಯ ಇಂಟರ್ನಿಗಳನ್ನು ಅವರ ಬೋಧಕ ವರ್ಗದ ಮೇಲ್ವಿಚಾರಣೆಯಲ್ಲಿ ನಿಯೋಜಿಸಲು ನಿರ್ಧರಿಸಿತು. ಈ ರೀತಿಯ ಕರ್ತವ್ಯದಲ್ಲಿ ತೊಡಗಿಕೊಳ್ಳುವ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಲಸಿಕೆ ಹಾಕಲು ಸಮಿತಿ ನಿರ್ಧರಿಸಿದೆ.

ಖ್ಯಾತ ಹೃದಯ ತಜ್ಞ ಡಾ. ದೇವಿ ಶೆಟ್ಟಿ ಅವರು ಕೊಟ್ಟ ಸಲಹೆಯನ್ನು ಪ್ರಧಾನಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಪರಿಗಣಿಸಿದಂತಿದೆ. ಒಂದು ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದ ವಿಡಿಯೋದಲ್ಲಿ ಡಾ. ಶೆಟ್ಟಿ ಅವರು ಕೊವಿಡ್ನಿಂದ ಮುಂದೆ ಬರಬಹುದಾದ ಸಂಕಟಗಳ ಬಗ್ಗೆ ವಿವರಿಸುತ್ತ, ಇನ್ನು ಮುಂದೆ ವೈದ್ಯರುಗಳ ಕೊರತೆ ಉಂಟಾಗುತ್ತದೆ. ಆ ಕುರಿತಾಗಿ ಈಗಲೇ ಸರಕಾರ ಎಚ್ಚೆತ್ತುಕೊಂಡು ಕೊನೆಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರನ್ನು ಕೊವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಿ ಎಂಬ ಸಲಹೆ ನೀಡಿದ್ದರು.

ಈ ಬಗ್ಗೆ ಸಭೆಯಲ್ಲಿ ಕೊವಿಡ್ ನಿಯಂತ್ರಣಕ್ಕೆ ಸಮರ್ಪಕ ಮಾನವ ಸಂಪನ್ಮೂಲಗಳ ಒದಗಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಯನ್ನು ಹೆಚ್ಚಿಸುವಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಪರಿಶೀಲನಾ ಸಭೆಯು ನೀಟ್-ಪಿಜಿಯನ್ನು ಕನಿಷ್ಠ ನಾಲ್ಕು ತಿಂಗಳು ಮುಂದೂಡಲು ನಿರ್ಧರಿಸಲಾಗಿದೆ ಇದರಿಂದಾಗಿ ಕೋವಿಡ್ ಕರ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯ ವೈದ್ಯರ ಲಭ್ಯವಾಗಲಿದೆ ಎಂಬ ಭರವಸೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಪ್ರಯತ್ನದಲ್ಲಿ, ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಸೇವೆಗಳನ್ನು ಟೆಲಿ-ಸಮಾಲೋಚನೆ ಮತ್ತು ಸೌಮ್ಯವಾದ ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆಯಂತಹ ಕೆಲಸಕ್ಕೆ ಬಳಸಿಕೊಳ್ಳಬಹುದು ಸರ್ಕಾರ ಹೇಳಿದೆ.