ಟೆಕ್ಸಾಸ್‌‌ನ ಬ್ಯಾಂಕ್‌ನಲ್ಲಿ ಮಾಸ್ಕ್‌ ಧರಿಸಲು ನಿರಾಕರಣೆ - ಮಹಿಳೆಯ ವಿರುದ್ದ ಬಂಧನ ವಾರಂಟ್‌‌ ಜಾರಿ - BC Suddi
ಟೆಕ್ಸಾಸ್‌‌ನ ಬ್ಯಾಂಕ್‌ನಲ್ಲಿ ಮಾಸ್ಕ್‌ ಧರಿಸಲು ನಿರಾಕರಣೆ – ಮಹಿಳೆಯ ವಿರುದ್ದ ಬಂಧನ ವಾರಂಟ್‌‌ ಜಾರಿ

ಟೆಕ್ಸಾಸ್‌‌ನ ಬ್ಯಾಂಕ್‌ನಲ್ಲಿ ಮಾಸ್ಕ್‌ ಧರಿಸಲು ನಿರಾಕರಣೆ – ಮಹಿಳೆಯ ವಿರುದ್ದ ಬಂಧನ ವಾರಂಟ್‌‌ ಜಾರಿ

ಗಾಲ್ವೆಸ್ಟನ್: ಟೆಕ್ಸಾಸ್‌‌ನ ಬ್ಯಾಂಕ್‌ನಲ್ಲಿ ಮಾಸ್ಕ್‌ ಧರಿಸಲು ನಿರಾಕರಿಸಿದ ಕಾರಣ ಮಹಿಳೆಯೋರ್ವರ ವಿರುದ್ದ ಪೊಲೀಸರು ಬಂಧನ ವಾರಂಟ್‌‌ ಜಾರಿ ಮಾಡಿದ್ದಾರೆ.

ಮಹಿಳೆಯೊಬ್ಬರಿಗೆ ಗಾಲ್ವೆಸ್ಟನ್‌ನ ಬ್ಯಾಂಕ್‌ ಆಫ್‌ ಅಮೆರಿಕದಲ್ಲಿ ಮಾಸ್ಕ್‌ ಧರಿಸುವಂತೆ ಪೊಲೀಸರು ತಿಳಿಸಿದ್ದರು. ಆದರೆ, ಮಾಸ್ಕ್‌ ಧರಿಸಲು ವಿರೋಧ ವ್ಯಕ್ತಪಡಿಸಿದ ಮಹಿಳೆ, “ಮಾಸ್ಕ್ ಧರಿಸದಿದ್ದರೆ ಏನು ಮಾಡುತ್ತೀರಿ?. ಬಂಧಿಸುತ್ತೀರಾ?” ಎಂದು ಸವಾಲು ಹಾಕಿದ್ದಾರೆ.

ಈ ಬಗ್ಗೆ ಪೊಲೀಸರು ಒರೆಗಾನ್‌ನ ಗ್ಯ್ರಾಟ್‌ ಪಾಸ್‌ ನಿವಾಸಿ ಟೆರಿ ರೈಟ್‌ ವಿರುದ್ಧ ಬಂಧನ ವಾರಂಟ್‌ ಜಾರಿ ಮಾಡಿದ್ದಾರೆ. ಪೊಲೀಸರ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದ್ದು, ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ವಿಡಿಯೋದಲ್ಲಿ ಟೆರಿ ರೈಟ್‌ ಅವರು ಬ್ಯಾಂಕ್‌ನ ಲಾಬಿಯಲ್ಲಿ ಮಾಸ್ಕ್‌ ಧರಿಸದೇ ನಿಂತಿರುವುದು ಕಾಣಬಹುದು. ಅವರ ಪಕ್ಕದಲ್ಲಿದ್ದ ಉಳಿದ ಗ್ರಾಹಕರು ಮಾಸ್ಕ್‌ ಧರಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಆಕೆಯನ್ನು ಪೊಲೀಸರು ಬಂಧಿಸಲು ಬಂದ ಸಂದರ್ಭ ಟೆರಿ ಅವರು ಬ್ಯಾಂಕ್‌ನ ಹೊರಗಡೆ ನಡೆದರು. ಈ ವೇಳೆ ಟೆರಿ ಅವರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಟೆರಿ ನಡುವೆ ವಾಗ್ವಾದ ನಡೆದಿದ್ದು, “ಟೆರಿ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)

error: Content is protected !!