ಮಲ್ಯ, ನೀರವ್‌ ಶೀಘ್ರ ಹಸ್ತಾಂತರ: ಮುನ್ನೋಟ–2030ಕ್ಕೆ ಬ್ರಿಟನ್‌-ಭಾರತ ಅಸ್ತು - BC Suddi
ಮಲ್ಯ, ನೀರವ್‌ ಶೀಘ್ರ ಹಸ್ತಾಂತರ: ಮುನ್ನೋಟ–2030ಕ್ಕೆ ಬ್ರಿಟನ್‌-ಭಾರತ ಅಸ್ತು

ಮಲ್ಯ, ನೀರವ್‌ ಶೀಘ್ರ ಹಸ್ತಾಂತರ: ಮುನ್ನೋಟ–2030ಕ್ಕೆ ಬ್ರಿಟನ್‌-ಭಾರತ ಅಸ್ತು

ನವದೆಹಲಿ: ದೇಶದ ಬ್ಯಾಂಕುಗಳಿಗೆ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಅವರ ಶೀಘ್ರ ಹಸ್ತಾಂತರ ಹಾಗೂ ಭಾರತ ಹಾಗೂ ಬ್ರಿಟನ್‌ ಮಧ್ಯೆ ಸಹಕಾರ ಹೆಚ್ಚಿಸಲು ಜಾರಿಗೊಳಿಸಬೇಕಾದ ಕಾರ್ಯಗಳ ಮುನ್ನೋಟಕ್ಕೆ ಉಭಯ ರಾಷ್ಟ್ರಗಳು ಮಂಗಳವಾರ ಅಸ್ತು ಎಂದಿದೆ.

ಉಭಯ ದೇಶಗಳ ಮಧ್ಯೆ ಸಂಬಂಧ ಅಭಿವೃದ್ದಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ನಡುವೆ ಮಂಗಳವಾರ ವರ್ಚುವಲ್‌ ಸಭೆ ನಡೆದಿದೆ. ಈ ಸಭೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ಯುರೋಪ್‌ಗೆ ಸಂಬಂಧಿಸಿದ ವ್ಯವಹಾರಗಳ ವಿಭಾಗದ ಜಂಟಿ ಕಾರ್ಯದರ್ಶಿ ಸಂದೀಪ್‌ ಚಕ್ರವರ್ತಿ, ಸಭೆಯಲ್ಲಿ ವಿಜಯ್‌ ಮಲ್ಯ ಹಾಗೂ ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದೆ. ಆರ್ಥಿಕ ಅಪರಾಧಗಳನ್ನು ಮಾಡಿ ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿರುವವರನ್ನು ಶೀಘ್ರವೇ ಹಸ್ತಾಂತರ ಮಾಡುವ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಉಭಯ ದೇಶಗಳ ನಡುವೆ ಸಂಬಂಧ ವೃದ್ಧಿ, ವ್ಯಾಪಾರ, ರಕ್ಷಣೆ, ಭದ್ರತೆ, ಹವಾಮಾನ ಬದಲಾವಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ವೃದ್ಧಿಸುವ ಮುನ್ನೋಟ–2030 ಅಡಿ ಕಾರ್ಯಕ್ರಮ ರೂಪಿಸಲು ಎರಡು ದೇಶಗಳ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ ಸಂದೀಪ್‌ ಚಕ್ರವರ್ತಿ, ಬ್ರಿಟನ್‌ನಲ್ಲಿ ತನ್ನ ಉತ್ಪಾದನಾ ಘಟಕವನ್ನು ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸ್ಥಾಪನೆ ಮಾಡಲಿದ್ದು ಲಸಿಕೆ ಉತ್ಪಾದನೆ ಮಾಡಲಿದೆ ಎಂದು ಬೋರಿಸ್‌ ಜಾನ್ಸನ್‌ ತಿಳಿಸಿರುವುದಾಗಿ ಮಾಹಿತಿ ನೀಡಿದರು.

ಸಿಲಿಕಾನ್ ಸಿಟಿಯಲ್ಲಿ ಬೆಡ್​ ಬ್ಲಾಕಿಂಗ್ ದಂಧೆ: ತೇಜಸ್ವಿ ಸೂರ್ಯಗೆ ಧನ್ಯವಾದ ತಿಳಿಸಿ ಕಾಲೆಳೆದ ಡಿಕೆಶಿ