ಏಪ್ರಿಲ್ 11 ರಿಂದ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಕೆಲಸದ ಸ್ಥಳಗಳಲ್ಲಿ ಉದ್ಯೋಗಸ್ಥರಿಗೆ ಕೊವೀಡ್-19 ಲಸಿಕೆ ನೀಡಲು  ಪ್ರಾರಂಭಿಸುತ್ತೇವೆ : ಡಾ.ಸುಧಾಕರ್ - BC Suddi
ಏಪ್ರಿಲ್ 11 ರಿಂದ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಕೆಲಸದ ಸ್ಥಳಗಳಲ್ಲಿ ಉದ್ಯೋಗಸ್ಥರಿಗೆ ಕೊವೀಡ್-19 ಲಸಿಕೆ ನೀಡಲು  ಪ್ರಾರಂಭಿಸುತ್ತೇವೆ : ಡಾ.ಸುಧಾಕರ್

ಏಪ್ರಿಲ್ 11 ರಿಂದ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಕೆಲಸದ ಸ್ಥಳಗಳಲ್ಲಿ ಉದ್ಯೋಗಸ್ಥರಿಗೆ ಕೊವೀಡ್-19 ಲಸಿಕೆ ನೀಡಲು  ಪ್ರಾರಂಭಿಸುತ್ತೇವೆ : ಡಾ.ಸುಧಾಕರ್

ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಸೋಂಕು ಪ್ರಕರಣ ತಡೆಗಟ್ಟಲು, ಏಪ್ರಿಲ್ 11 ರಿಂದ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಕೆಲಸದ ಸ್ಥಳಗಳಲ್ಲಿ ಉದ್ಯೋಗಸ್ಥರಿಗೆ ಕೊವೀಡ್-19 ಲಸಿಕೆಗಳನ್ನು ನೀಡಲು  ಪ್ರಾರಂಭಿಸುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬುಧವಾರ ತಿಳಿಸಿದ್ದಾರೆ.

ಬುಧವಾರ ಕೋವಿಡ್ ನಿಯಂತ್ರಣ ಸಂಬಂಧ ಬೀದರ್, ಬೆಳಗಾವಿ, ವಿಜಯಪುರ, ಕಲಬುರ್ಗಿ, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಸಚಿವರು ವೀಡಿಯೋ ಸಭೆ ನಡೆಸಿದ  ಬಳಿಕ ಅವರು ಮಾಧ್ಯಮದೊಂದಿಗೆ ಈ ಮಾಹಿತಿ ಹಂಚಿಕೊಂಡಿದ್ದಾರೆ.

“ಲಸಿಕೆ ನೀಡಲು ಉದ್ಯೋಗಸ್ಥರಿರುವ ಸ್ಥಳಕ್ಕೆ ಹೋಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು ಈ ಹಿನ್ನಲೆಯಲ್ಲಿ ಏಪ್ರಿಲ್ 11 ರಿಂದ, COVID-19 ಲಸಿಕೆಗಳನ್ನು 45 ವರ್ಷಕ್ಕಿಂತ ಮೇಲ್ಪಟ್ಟ ಕನಿಷ್ಠ 100 ಅರ್ಹ ಫಲಾನುಭವಿಗಳನ್ನು ಹೊಂದಿರುವ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಕೆಲಸದ ಸ್ಥಳಗಳಲ್ಲಿ ವಿತರಿಸಬಹುದಾಗಿದೆ” ಎಂದು ಸಚಿವರು ತಿಳಿಸಿದ್ದಾರೆ.

“ಹಲವಾರು ದೊಡ್ಡ ಉದ್ಯಮಗಳು ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸಂಸ್ಥೆಯ ಆವರಣದಲ್ಲಿಯೇ ಲಸಿಕೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಹಿನ್ನಲೆಯಲ್ಲಿ ಸರ್ಕಾರ ಈ ಯೋಜನೆ ಹಾಕಿಕೊಂಡಿದೆ. ಕೆಲಸದ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿದ್ದರೆ ವ್ಯಾಕ್ಸಿನೇಷನ್ ಡ್ರೈವ್ ಗೆ ಮತ್ತಷ್ಟು ವೇಗ ಸಿಗುತ್ತದೆ. ಇದರಿಂದಾಗಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಲಿದೆ. ಈವರೆಗೆ 50 ಲಕ್ಷ ಡೋಸ್ ತಲುಪಲಾಗಿದೆ. ಆದಷ್ಟು ಶೀಘ್ರ ಇನ್ನಷ್ಟು 50 ಲಕ್ಷವಾಗಿ, ಒಂದು ಕೋಟಿ ತಲುಪಲಿದೆ” ಎಂದಿದ್ದಾರೆ

ನೆಹರೂ ಕುಟುಂಬಕ್ಕೆ ‘ಗಾಂಧಿ’ ಸರ್‌‌ನೇಮ್‌ ಅಂಟಿಕೊಂಡಿದ್ದು ಹೇಗೆ?: ಕಾಂಗ್ರೆಸ್‌ನ ಕಾಲೆಳೆದ ಬಿಜೆಪಿ

error: Content is protected !!