ಸಾಲ ಮಾಡಿ ಲಾಟರಿ ಖರೀದಿಸಿದ್ದ ವಾಚ್​ಮ್ಯಾನ್ ಈಗ ಕೋಟ್ಯಧಿಪತಿ - BC Suddi
ಸಾಲ ಮಾಡಿ ಲಾಟರಿ ಖರೀದಿಸಿದ್ದ ವಾಚ್​ಮ್ಯಾನ್ ಈಗ ಕೋಟ್ಯಧಿಪತಿ

ಸಾಲ ಮಾಡಿ ಲಾಟರಿ ಖರೀದಿಸಿದ್ದ ವಾಚ್​ಮ್ಯಾನ್ ಈಗ ಕೋಟ್ಯಧಿಪತಿ

ಮಂಗಳೂರು:ತೊಕ್ಕೊಟ್ಟು ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ವಾಚ್​ಮ್ಯಾನ್ ಆಗಿರುವ ವ್ಯಕ್ತಿ ಈಗ ಕೋಟ್ಯಧಿಪತಿಯಾಗಿದ್ದಾರೆ.

ಹೌದು. ಲಾಟರಿ ತೆಗೆಯುವ ಹವ್ಯಾಸವಿದ್ದ ವಾಚ್​ಮ್ಯಾನ್ ಮೊಯ್ದಿನ್ ಕುಟ್ಟಿ ಉಪ್ಪಳದಲ್ಲಿ ಖರೀದಿಸಿದ್ದರು. ಏಪ್ರಿಲ್​ 4ರಂದು ಡ್ರಾ ಆದ ಲಾಟರಿಯಲ್ಲಿ ಇವರು ಕೊಂಡಿದ್ದ ಬಿಜೆ 134048 ಸಂಖ್ಯೆಗೆ ಪ್ರಥಮ ಬಹುಮಾನ ಬಂದಿದೆ. ಲಾಟರಿಯ ಪ್ರಥಮ ಬಹುಮಾನದಲ್ಲಿ ಐದು ಮಂದಿ ಕೋಟಿ ವಿಜೇತರಲ್ಲಿ ಮೊಯ್ದಿನ್ ಕುಟ್ಟಿ ಕೂಡ ಒಬ್ಬರಾಗಿದ್ದಾರೆ.

ಮೊಯ್ದೀನ್ ಕುಟ್ಟಿ ಅವರು ಸ್ಮಾರ್ಟ್​ ಸಿಟಿಯಲ್ಲಿ ಒಮೆಗಾ ಟೈಲರ್ ಅಂಗಡಿಯ ಮಾಲೀಕ ರವಿ ಅವರಿಂದ 500 ರೂ. ಸಾಲ ಪಡೆದು ಉಪ್ಪಳಕ್ಕೆ ತೆರಳಿ ಲಾಟರಿ ಖರೀದಿಸಿದ್ದರು. ಕಳೆದ ಹಲವು ದಶಕಗಳಿಂದ ಲಾಟರಿ ಖರೀದಿಸುವ ಗೀಳು ಇಟ್ಟುಕೊಂಡಿದ್ದ ಕುಟ್ಟಿಗೆ ಈ ಬಾರಿ ಭಾಗ್ಯಮಿತ್ರ ಅದೃಷ್ಟ ಒಲಿದಿದೆ.

ವಿವಾಹಕ್ಕಾಗಿ ಕೇವಲ ಶಾರ್ಟ್ಸ್ ಧರಿಸಿ ಹಸೆಮಣೆಯಲ್ಲಿ ಕೂತ ವರ – ಪೋಟೊ ವೈರಲ್

error: Content is protected !!