ಬಿಗ್‌ ಬ್ರೇಕಿಂಗ್: ದೆಹಲಿಯಲ್ಲಿ‌ ಇಂದು ರಾತ್ರಿಯಿಂದಲೇ ಲಾಕ್ ಡೌನ್‌ ಜಾರಿ - BC Suddi
ಬಿಗ್‌ ಬ್ರೇಕಿಂಗ್: ದೆಹಲಿಯಲ್ಲಿ‌ ಇಂದು ರಾತ್ರಿಯಿಂದಲೇ ಲಾಕ್ ಡೌನ್‌ ಜಾರಿ

ಬಿಗ್‌ ಬ್ರೇಕಿಂಗ್: ದೆಹಲಿಯಲ್ಲಿ‌ ಇಂದು ರಾತ್ರಿಯಿಂದಲೇ ಲಾಕ್ ಡೌನ್‌ ಜಾರಿ

ನವದೆಹಲಿ : ಕೊರೊನಾ ಎರಡನೇ ಅಲೆ ಆರ್ಭಟ ಜೋರಾಗಿದೆ. ಕಂಟ್ರೋಲ್ ಗೆ ಸಿಗದ ಕೊರೊನಾ ನಾಗಾಲೋಟ ಮುಂದುವರೆಸಿದೆ.
ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ.

ಹೀಗಾಗಿ ವಾರಾಂತ್ಯಕ್ಕೆ ಮಾತ್ರ ನಿಗದಿಯಾಗಿದ್ದ ಕರ್ಫ್ಯೂವನ್ನು ಒಂದು ವಾರ ಕಾಲ ವಿಸ್ತರಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಇಂದು ರಾತ್ರಿಯಿಂದ ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಅಂದರೆ ಒಂದು ವಾರ ಕಾಲ ದೆಹಲಿಯಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಹೊಸ ಆದೇಶ ಇಂದು ರಾತ್ರಿಯಿಂದಲೇ ಅನ್ವಯವಾಗಲಿದೆ.